ಕೋಲಾರ: ಜಿಲ್ಲೆಯ ಕೆಜಿಎಫ್ ನಗರದ ರಾಬರ್ಟ್​​ ಸನ್​​ ಪೇಟೆ ಪೊಲೀಸ್ ಠಾಣೆಯ ಮಹಿಳಾ ಪಿಎಸ್​ಐ ಕ್ಯಾನ್ಸರ್​​ ಕಾಯಿಲೆಯಿಂದ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ.

ಗಾಯತ್ರಿ (51) ಕ್ಯಾನ್ಸರ್​ಗೆ ಮೃತಪಟ್ಟ ಪಿಎಸ್​ಐ. ಕಳೆದ 30 ವರ್ಷಗಳಿಂದ ಕೆಜಿಎಫ್ ಪೊಲೀಸ್ ಇಲಾಖೆಯಲ್ಲಿ ಗಾಯತ್ರಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು.

ಮೃತ ಗಾಯತ್ರಿ ಅವರು ಕೆಜಿಎಫ್ ನಗರದ ರಾಬರ್ಟ್‌ ಸನ್ ಪೇಟೆಯಲ್ಲಿ ನಿವಾಸಿಯಾಗಿದ್ದಾರೆ. ಇನ್ನೂ 9 ವರ್ಷಗಳ ಸೇವಾವಧಿ ಇತ್ತು. ಕೆಜಿಎಫ್​ ಎಸ್​ಪಿ ಶಾಂತರಾಜು, ಡಿವೈಎಸ್​ಪಿ ಪಾಂಡುರಂಗ ಸೇರಿದಂತೆ ಕೆಜಿಎಫ್ ಪೊಲೀಸರಿಂದ ಸಂತಾಪ ಸೂಚಿಸಲಾಗಿದೆ.