ಕೋಲಾರ: ಕಂಟೇನರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ, ಅದರಲ್ಲಿದ್ದ ಮೂರು ಹಸುಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.

ಕ್ಯಾಲನೂರು ಕಡೆಯಿಂದ ಹೆಚ್ ಕ್ರಾಸ್ ಕಡೆಗೆ ತಿರುಗುವ ತಿರುವಿನಲ್ಲಿ ಈ ದುರ್ಘಟನೆ ಸಂಭವಿಸಿದೆ. ಲಾರಿಯು ಪಲ್ಟಿಯಾದ ರಭಸಕ್ಕೆ ವಾಹನದಲ್ಲಿದ್ದ 21 ಹಸುಗಳ ಪೈಕಿ 3 ಹಸುಗಳು ಮೃತಪಟ್ಟಿವೆ.

ಉಳಿದ 18 ಹಸುಗಳು ಪ್ರಾಣಾಪಾಯದಿಂದ ಪಾರಾಗಿದ್ದು, ಕೆಲ ಹಸುಗಳ ಕೊಂಬು ಮುರಿದು ತೀವ್ರ ರಕ್ತಸ್ರಾವವಾಗಿದೆ. ಇನ್ನುಳಿದ ಹಸುಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಂಟೇನರ್ ಒಳಗೆ ಒಟ್ಟು ಎಷ್ಟು ಹಸುಗಳನ್ನು ತುಂಬಲಾಗಿತ್ತು ಎಂಬ ನಿಖರ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.