ಕೊಡಗು: ಕಳೆದ ಗುರುವಾರ ಮಡಿಕೇರಿಯ ತಡಿಯಂಡಮೋಳ್ ಬೆಟ್ಟದಲ್ಲಿ ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಕೇರಳ ಮೂಲದ ಯುವತಿ ಕೊನೆಗೂ ಪತ್ತೆ ಆಗಿದ್ದಾರೆ.

ಪೊಲೀಸ್​, ಅರಣ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಶ್ವಾನ ದಳ ಹುಡುಕಾಟ ನಡೆಸಿದರೂ ಶರಣ್ಯಳ ಸುಳಿವೇ ಸಿಕ್ಕಿರಲಿಲ್ಲ. ಇದೀಗ ಪಾಳು ಬಿದ್ದ ಬಂಗಲೆಯೊಂದರಲ್ಲಿ ಯುವತಿ ಪತ್ತೆ ಆಗಿದ್ದಾರೆ.

ಕೊಡಗು: ಜಿಲ್ಲೆಯ ಮಡಿಕೇರಿ ತಾಲೂಕಿನ ತಡಿಯಂಡಮೋಳ ಬೆಟ್ಟದಲ್ಲಿ ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಕೇರಳ ಮೂಲದ ಐಟಿ ಉದ್ಯೋಗಿ ಶರಣ್ಯ (Sharanya) ಕೊ‌ನೆಗೂ ಪತ್ತೆ ಆಗಿದ್ದಾರೆ.

ಆ ಮೂಲಕ ನಾಲ್ಕು ದಿನಗಳ‌ ಕಾರ್ಯಾಚರಣೆ ಯಶಸ್ವಿ ಆಗಿದ್ದು, ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ. ರಸ್ತೆ ಅರಿವಾಗದೆ ಪಾಳು ಬಿದ್ದ ಬಂಗಲೆಯೊಂದರಲ್ಲೇ ಶರಣ್ಯ ಉಳಿದುಕೊಂಡಿದ್ದರು. ಸ್ಥಳೀಯ ಜನಾಂಗದವರ ಸಹಾಯ ಬೆನ್ನಲ್ಲೇ ಇದೀಗ ಯುವತಿ ಪತ್ತೆ ಆಗಿದ್ದಾರೆ.