ಕೊಡಗು : ವಿನಯ್ ಮೃತ ದೇಹ ದರ್ಶನವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪಡೆದರು. ಸಂಸದ ಯದುವೀರ್, ಮಾಜಿ ಸಂಸದ ಪ್ರತಾಪ್‌ ಸಿಂಹ, ಮಾಜಿ ಸ್ಪೀಕರ್ ಭೋಪಯ್ಯ, ಶಾಸಕ ಶ್ರೀವತ್ಸ, ಎಂ.ಎಲ್.ಸಿ ಸುಜಾಕುಶಾಲಪ್ಪ, ಜಿಲ್ಲಾಧ್ಯಕ್ಷ ರವಿ ಕಾಳಪ್ಪ. ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರದ ಬಳಿ ದರ್ಶನ ಪಡೆದರು.

ದರ್ಶನದ ನಂತರ ಹೋರಾಟ ರೂಪರೇಷೆಗಳನ್ನು ನಾಯಕರು ಚರ್ಚಿಸುತ್ತಿದ್ದಾರೆ. ಆಸ್ಪತ್ರೆ ಆವರಣದಲ್ಲಿ ಕುಟುಂಬ ಸದಸ್ಯರ ಜೊತೆ ಮಾತುಕತೆ ನಡೆಸಿದರು. ವಿನಯ ಸೋಮಯ್ಯ ಕುಟುಂಬಸ್ಥರಿಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪರಿಹಾರ ನೀಡಿದರು.