ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಮೊಹಮ್ಮದ್‌ ನಲಪಾಡ್‌ ಅವರ ಎರಡನೇ ವಿವಾಹ ಕೊಡಗಿನ ಪ್ರತಿಷ್ಠಿತ ರೆಸಾರ್ಟ್‌ನಲ್ಲಿ ವೇದಿಕೆ ಸಿದ್ದವಾಗಿದೆ. ಮಡಿಕೇರಿ ಹೊರವಲಯದ ಮೇಕೇರಿ ಗ್ರಾಮದಲ್ಲಿರುವ ಮಾಜಿ ಸಚಿವ ಟಿ. ಜಾನ್‌ ಕುಟುಂಬಸ್ಥರ ಒಡೆತನದ ಕೂರ್ಗ್‌ ವೈಲ್ಡರ್‌ನೆಟ್‌ ರೆಸಾರ್ಟ್‌ನಲ್ಲಿ ಮದುವೆ ಸಂಭ್ರಮ ನಡೆಯಲಿದೆ.

2017ರಲ್ಲಿ ಸಮ್ರೀನ್ ಸೇಲಂ ಅವರನ್ನು ವಿವಾಹವಾಗಿದ್ದ ಅವರು ಇದೀಗ ಎರಡನೇ ವಿವಾಹವಾಗುತ್ತಿದ್ದಾರೆ. ಕೊಡಗು ಜಿಲ್ಲಾ ಕಾಂಗ್ರೆಸ್‌ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಗೂ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್‌.ಐ. ಮುನೀರ್‌ ಅಹಮ್ಮದ್‌ ಅವರ ಮೂರನೇ ಪುತ್ರಿ ಮಲಿಹಾ ಫಾತಿಮಾ ಅವರನ್ನು ನಲಪಾಡ್‌ ವಿವಾಹವಾಗಲಿದ್ದಾರೆ.

View this post on Instagram

A post shared by News Karnataka (@newskarnataka)