ಕೊಡಗು : ನನ್ನ ತಂಗಿಯ ಫೋಟೋವನ್ನು ಇಟ್ಟುಕೊಂಡು ಸುಜಾತ ಭಟ್ ತನ್ನ ಮಗಳು ಅನನ್ಯಾ ಭಟ್ ಎಂದು ಹೇಳಿಕೊಳ್ಳುತ್ತಿದ್ದಾರೆ. ಆ ಪೋಟೋ ನನ್ನ ಸಹೋದರಿ ವಾಸಂತಿ ಅವರದ್ದು. ವಿರಾಜಪೇಟೆಯಲ್ಲಿ ವಾಸಂತಿ ಸಹೋದರ ವಿಜಯ್ ಹೇಳಿಕೆ ನೀಡಿದ್ದಾರೆ.
ನನ್ನ ತಂಗಿಯ ಫೋಟೋವನ್ನು ದುರ್ಬಳಕೆ ಮಾಡಲಾಗುತ್ತಿದೆ. ವಾಸಂತಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದವಳಲ್ಲ. ಆಕೆ ಕೊಡವ ಸಮಾಜಕ್ಕೆ ಸೇರಿದವಳು. ನನ್ನ ತಂಗಿಯ ಫೋಟೋ ನೋಡಿ ನಾವು ಆಘಾತಗೊಂಡಿದ್ದೇವೆ. ನನ್ನ ತಂಗಿ ಮತ್ತು ಶ್ರೀವತ್ಸ ಪ್ರೀತಿಸಿ 2007 ರಲ್ಲಿ ಮದುವೆಯಾಗಿದ್ದರು. ಮದುವೆಯಾದ ಒಂದೇ ತಿಂಗಳಿಗೆ ವಿರಾಜಪೇಟೆಗೆ ಆಗಮಿಸಿದ್ದರು.

ನಂತರ ಅವಳು ಕೆದ್ದಮುಳ್ಳೂರು ಗ್ರಾಮದ ನದಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಅಪರಿಚಿತ ಶವ ಪತ್ತೆಯಾದ ಬಳಿಕ ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಮೃತದೇಹದಲ್ಲಿದ್ದ ಬಟ್ಟೆ ಹಾಗೂ ಅವರ ಚಹರೆಗಳನ್ನು ತೋರಿಸಿದಾಗ ನನ್ನ ಸಹೋದರಿ ಎನ್ನುವುದು ದೃಢಪಟ್ಟಿತ್ತು. ಆ ಪೋಟೋ ವಾಸಂತಿಯದ್ದು ಅನನ್ಯ ಭಟ್ ದಲ್ಲ ವಿಜಯ್ ಸ್ಪಷ್ಟನೆ ನೀಡಿದ್ದಾರೆ.

