ಕೊಡಗು : ಕೆರೆಗೆ ಹಾರಿ ತಾಯಿ ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಲಕಾವೇರಿ ಸಮೀಪದ ತಣ್ಣಿಮಾನಿ ಎಂಬಲ್ಲಿ ನಡೆದಿದೆ.
ತಾಯಿ ಪ್ರೇಮ(45), ಪುತ್ರಿ ಪ್ರಿಯಾಂಕ (14) ಮೃತ ದುರ್ಧೈವಿ ಗಳು. ಮನೆಯಲ್ಲಿ ಪರಸ್ಪರ ಜಗಳ ಮಾಡಿಕೊಂಡಿದ್ದ ತಾಯಿ ಮಗಳು. ತಾನು ಕೆರೆಗೆ ಹಾರುವುದಾಗಿ ಹೇಳಿ ಪ್ರಿಯಾಂಕ ಓಡಿದ್ದಳು. ಮಗಳ ಹಿಂದೆ ತಾಯಿ ಪ್ರೇಮ ಓಡಿದ್ದಳು. ಮಗಳು ಕೆರೆಗೆ ಹಾರಿದಳೆಂದು ತಾಯಿಯೂ ಹಾರಿದಳು.
ಸ್ಥಳೀಯರಿಂದ ಇಬ್ಬರನ್ನ ರಕ್ಷಿಸುವ ಪ್ರಯತ್ನ ವಿಫಲವಾಯಿತು. ಇಂದು ಮೃತ ದೇಹವನ್ನು ಅಗ್ನಿ ಶಾಮಕ ಸಿಬ್ಬಂದಿಗಳು ಹೊರತೆಗೆದರು. ಭಾಗಮಂಡಲ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಭಾಗಮಂಡಲ ಪೊಲೀಸರು ಭೇಟಿ ನೀಡಿದರು. ಮೃತದೇಹದ ಮಡಿಕೇರಿ ಶವಗಾರಕ್ಕೆ ರವಾನೆ ಮಾಡಲಾಯಿತು.

