ಕೊಡಗು: ಮೇನು ಚಾರ್ಟ್ ಪ್ರಕಾರ ಊಟ ನೀಡುತ್ತಿಲ್ಲ, ಕೇಳಿದರೆ ನಮ್ಮನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಆರ್ಜಿ ಗ್ರಾಮದಲ್ಲಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳ ಅಳಲು ತೋಡಿಕೊಂಡಿದ್ದಾರೆ.

ಮೇನು ಚಾರ್ಟ್ ಇರೋದೆ ಒಂದು ನಮಗೆ ಕೊಡೋದೆ ಒಂದು. ಒಂದೇ ತರಹದ ಊಟವನ್ನು ಕೊಡ್ತಾರೆ. ಸಾಂಬಾರ್ ನೀರಿನ ತರನೇ ಇರುತ್ತೆ. ಒಂದೇ ಒಂದು ತೆಂಗಿನಕಾಯಿಯಲ್ಲಿ 150 ವಿದ್ಯಾರ್ಥಿಗಳಿಗೆ ಊಟ ಕೊಡ್ತಾರೆ. ಪೋಟೋ ತೆಗೆಯುವಾಗ ಮಾತ್ರ ಎಲ್ಲಾ ತರಕಾರಿಗಳು ಕಾಣಿಸುವಂತೆ ತೆಗೆಯುತ್ತಾರೆ.

ನಾವು ಕೇಳಿದ್ರೆ ಬೇರೆ ವಿಷಯದಲ್ಲಿ ಟಾರ್ಗೆಟ್ ಮಾಡ್ತಾರೆ. ನಿಲಯ ಪಾಲಕ ಮತ್ತು ಪ್ರಾಂಶುಪಾಲರ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಮೇಲಾಧಿಕಾರಿಗಳು ಶಾಲೆಗೆ ಭೇಟಿ ನೀಡಿ ನಮ್ಮ ಸಮಸ್ಯೆ ಆಲಿಸುವಂತೆ ವಿದ್ಯಾರ್ಥಿಗಳು ಆಗ್ರಹಿಸಿದರು. ಪೋಷಕರೊಂದಿಗೆ ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡರು.