ಕೊಡಗು : ಜಿಲ್ಲೆಯಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಆನೆ ದಾಳಿಗೆ ಚೆಂಬು ಗ್ರಾಮದ ರೈತ ಸಾವನ್ನಪ್ಪಿದ್ದಾರೆ.

ಚೆಂಬು ಗ್ರಾಮದ ದಬ್ಬಕ್ಕ ಭಾಗದಲ್ಲಿ ರಾತ್ರಿ ಆನೆ ದಾಳಿ ಮಾಡಿದೆ.  ಕೊಪ್ಪದ ಶಿವಪ್ಪ (72) ರೈತ ಸಾವು. ಚೆಂಬು ಗ್ರಾಮದ ದಬ್ಬಡ್ಕ ಭಾಗದಲ್ಲಿ ರಾತ್ರಿ 9 ಗಂಟೆಗೆ ಆನೆ ದಾಳಿ ನಡೆಸಿದ್ದು,  ರಾತ್ರಿ 8:30 ಗಂಟೆಗೆ ಕೊಪ್ಪದ ಶಿವಪ್ಪ ತನ್ನ ಮನೆಯ ಮುಂಭಾಗದಲ್ಲಿ ಸದ್ದು ಕೇಳಿ ಬಂದ ಹಿನ್ನೆಲೆಯಲ್ಲಿ ಮನೆಯಿಂದ ಹೊರ ಬಂದಿದ್ದಾರೆ.

ಮನೆಯ ಮುಂಭಾಗದಿಂದ 30 ಮೀಟರ್ ದೂರದಲ್ಲಿ ನಡೆದು ಕೊಂಡು ಹೋದಾಗ ಕಾಡಾನೆ ದಿಢೀರ್ ದಾಳಿ ನಡೆಸಿದೆ. ಆನೆ ದಾಳಿಯಿಂದ ಎದೆ ಭಾಗ ಹಾಗೂ ಬೆನ್ನಿನ ಭಾಗಕ್ಕೆ ತೀವ್ರ ಸ್ವರೂಪದ ಗಾಯವಾಗಿ ಆಸ್ಪತ್ರೆಗೆ ಸಾಗಿಸುವ ಸಂದರ್ಭ ಶಿವಪ್ಪ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಸಂಕೇತ್ ಪೂವಯ್ಯ ಭೇಟಿ ನೀಡಿದ್ದಾರೆ. ಆನೆ ಓಡಿಸುವ ಕಾರ್ಯಾಚರಣೆ ಮಾಡುವಂತೆ ಅರಣ್ಯ ಇಲಾಖೆಗೆ ಸೂಚನೆ ನೀಡಿದೆ. ಪುಂಡಾನೆ ಸೆರೆ ಹಿಡಿಯಲು ಬೇಕಾದ ಎಲ್ಲಾ ಇಲಾಖೆ ಕಾನೂನುಗಳನ್ನ ಈಡೇರಿಸಿ, ಶೀಘ್ರದಲ್ಲಿ ಆನೆ ಹಿಡಿಯಲು ಅನುಮತಿ ಕೊಡಿಸಿ ಕೊಡುವುದಾಗಿ ಭರವಸೆ ನೀಡಿದರು.

ಅರಣ್ಯ ಇಲಾಖೆಗೆ ಹೆಚ್ಚು ಸಿಬ್ಬಂದಿ ಒದಗಿಸುವ ಭರವಸೆ ನೀಡಿಲಾಗಿದೆ. ಈ ಸಂದರ್ಭದಲ್ಲಿ ವಲಯ ಕಾಂಗ್ರೆಸ್ ಅಧ್ಯಕ್ಷ ರವಿರಾಜ್ ಹೊಸೂರು, ಸಾಮಾಜಿಕ ಜಾಲತಾಣ ಜಿಲ್ಲಾಧ್ಯಕ್ಷ ಸೂರಜ್ ಹೊಸೂರು, ಗ್ರಾಮ ಪಂಚಾಯತ್ ಸದಸ್ಯ ಆದಮ್ ಕುಂಹಿ, ಪದ್ಮನಾಭ ಮಂಗಳಪ್ಪಾರೆ, ರಘುನಾಥ್ ಬಾಲಂಬಿ, ವಿನಯ ಮಾಣಿಕಲ್ಲು, ಕೊಪ್ಪದ ಶಿವರಾಮ, ಕೊಪ್ಪದ ಭುವನೇಶ್ವರ, ವಲಯ ಅರಣ್ಯ ಅಧಿಕಾರಿ, ಸಿಬ್ಬಂದಿ ವರ್ಗದವರು ಹಾಗೂ ವೈದ್ಯರು ಉಪಸ್ಥಿತರಿದ್ದರು.