ಕೊಡಗು: ಮಡಿಕೇರಿಯಲ್ಲಿ ಹನಿ ಟ್ರ್ಯಾಪ್ ಶಂಕೆ ವ್ಯಕ್ತವಾಗಿದೆ. ಯುವಕರಿಂದ ಏಟು ತಿಂದು ಎಸ್ಕೇಪ್ ಆಗಿ ಠಾಣೆಗೆ  ಯುವಕ ಓಡಿ ಬಂದಿದ್ದಾನೆ. ಮನೆಯೊಂದರಲ್ಲಿ ರಾತ್ರಿಯಿಡೀ ಯುವಕರು ಥಳಿಸಿರುವ ಘಟನೆ ಮಡಿಕೇರಿಯ ಮಂಗಳಾದೇವಿ ನಗರದಲ್ಲಿ ನಡೆದಿದೆ.

ಮಂಡ್ಯ ಜಿಲ್ಲೆ ಮದ್ದೂರಿನ  ಯುವಕ ಮಹದೇವನಿಗೆ  ಮೂವರಿಂದ ಹಲ್ಲೆ ನಡೆಸಲಾಗಿದೆ. ಫೇಸ್ ಬುಕ್ ನಲ್ಲಿ ಪರಿಚಯವಾಗಿ ಮಹಿಳೆಯನ್ನ ಭೇಟಿಯಾಗಲು ಯುವಕ ಮಡಿಕೇರಿಗೆ ಬಂದಿದ್ದಾನೆ. ಯುವನಿಂದ ಹಣಕ್ಕೆ ಟೀಂ ಬೇಡಿಕೆ ಇಟ್ಟಿದೆ.

ಮೂವರು ಯುವಕರನ್ನು ಪೊಲೀಸರು ಹುಟುಕಾಟ ನಡೆಸುತ್ತಿದ್ದಾರೆ. ಮಡಿಕೇರಿ ನಗರ ಠಾಣೆಯಲ್ಲಿ ಸಂತ್ರಸ್ಥ ಯುವಕ ದೂರು ನೀಡಿದ್ದಾನೆ. ಯುವಕ ತಪ್ಪಿಸಿಕೊಂಡು ಬರುವಾಗ ಆಟೋದಲ್ಲಿ ಬಂದು ಕಿಡ್ನಾಪ್ ಮಾಡಲು ಟೀಂ  ಯತ್ನಿಸಿದೆ. ಅಲ್ಲಿಂದಲೂ ತಪ್ಪಿಸಿಕೊಂಡು ನಗರ ಠಾಣೆಗೆ ಬಂದು ದೂರು ನೀಡಿದ್ದಾರೆ.

ಯುವಕ‌ ಕಿಡ್ನಾಪ್ ಗೆ ಯತ್ನಿಸಿದ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಯುವಕನ ಹಲ್ಲೆಗೆ ಬಳಸಿದ ಮಾರಕಾಸ್ತ್ರಗಳನ್ನ  ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದಲ್ಲಿ ಹನಿ ಟ್ರ್ಯಾಪ್ ಅನುಮಾನ ಮೂಡಿದ್ದು ಪೊಲೀಸರಿಂದ ವಿಚಾರಣೆ ನಡೆಸಲಾಗುತ್ತಿದೆ.