ಕೊಡಗು : ಚೆಟ್ಟಳ್ಳಿ ನಿವಾಸಿ ಮಾಜಿ ಸೈನಿಕ ಗಿರೀಶ್ ನಾಪತ್ತೆಯಾಗಿದ್ದು, ಕಾವೇರಿ ನದಿಯಲ್ಲಿ ಹುಡುಕಾಟ ನಡೆಯುತ್ತಿದೆ. ಕೊಡಗು ಜಿಲ್ಲೆ ಸುಂಟಿಕೊಪ್ಪ ಚೆಟ್ಟಳ್ಳಿ ನಿವಾಸಿ ಮಾಜಿ ಸೈನಿಕ ಗಿರೀಶ್(46) ನಾಪತ್ತೆಯಾಗಿದ್ದಾರೆ.

ಗಿರೀಶ್ ಕುಶಾಲನಗರದ ಎಸ್.ಎಲ್.ಎನ್ ಸಂಸ್ಥೆ ಯ ಉದ್ಯೋಗಿಯಾಗಿದ್ದು, ಗಿರೀಶ್ ಬೈಕ್ ಕುಶಾಲನಗರದ ತೆಪ್ಪದಕಂಡಿ ಬಳಿ ಪತ್ತೆಯಾಗಿದೆ. ಈ ಹಿನ್ನಲೆ ಗಿರೀಶ್ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಹೀಗಾಗಿ ಕುಶಾಲನಗರ ಪೊಲೀಸರು, ಅಗ್ನಿ ಶಾಮಕ ದಳ, ಎನ್ ಡಿಆರ್ ಎಫ್ ಸಿಬ್ಬಂದಿ ತೆಪ್ಪದ ಕಂಡಿ ಬಳಿ ಕಾವೇರಿ ನದಿಯಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ. ಕುಶಾಲನಗರ ನಗರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.