ಕೊಡಗು: ಕಾಫಿ ತೋಟದ ಮಧ್ಯೆ ಹೆಣ್ಣಾನೆ ಸಾವನ್ನಪ್ಪಿರುವ ಘಟನೆ ವಿರಾಜಪೇಟೆ ತಾಲೂಕಿನ ಆನಂದಪುರ ಗ್ರಾಮದಲ್ಲಿ ನಡೆದಿದೆ.

ಅನಾರೋಗ್ಯದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಮೃತ ತಾಯಿ ಆನೆಯನ್ನು ಕಳೆದುಕೊಂಡು ಮರಿಯಾನೆ ಕಣ್ಣೀರು ಹಾಕುತ್ತಿದೆ. ಗ್ರಾಮದ ಕೌರಿಕಾಡು ಎಸ್ಟೇಟಿನಲ್ಲಿ ಆನೆ ಸಾವನ್ನಪ್ಪಿದೆ.

ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.