ಕೊಡಗು : ಮಂಜಿನ ನಗರಿ ಮಡಿಕೇರಿಯಲ್ಲಿ ನಿರಂತರ ಮಳೆಯಾಗಿದ್ದು, ಜಲಬೆಡಗಿ ಅಬ್ಬಿ ಮೈದುಂಬಿ ಹರಿಯುತ್ತಿದೆ. ಅಬ್ಬಿ ಜಲ ನರ್ತನ ನೋಡಲು ಪ್ರವಾಸಿಗರ ದಂಡು ಹೆಚ್ಚಾಗಿದ್ದು, ಮಳೆ ನಡುವೆ ಜಲಪಾತದ ಸೌಂದರ್ಯ ಸವಿಯಲು ಪ್ರವಾಸಿಗರು ಮುಗಿಬೀಳುತ್ತಿದ್ದಾರೆ.

ಬೆಟ್ಟ, ಹೆಬ್ಬಂಡೆಗಳ ಮೇಲೆ ವಯ್ಯಾರದಿ ಅಬ್ಬಿ ಜಲಪಾತ ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿದೆ. ಮಡಿಕೇರಿಯಿಂದ ಕೇವಲ 8 ಕಿಮೀ ದೂರದಲ್ಲಿರುವ ಜಲಪಾತವಿದೆ. ಮಳೆಗಾಲದಲ್ಲಿ ಜಲಪಾತದ ಸೌಂದರ್ಯ ಹೆಚ್ಚುತ್ತಿದೆ.
ಹಚ್ಚ ಹಸಿರು, ಕಾಫಿ ತೋಟಗಳು ಜಲಪಾತದ ಸುತ್ತಲೂ ಪ್ರವಾಸಿಗರ ಕಣ್ಮನ ಸೆಳೆಯುತ್ತದೆ. ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯಗಳಿಂದಲೂ ಪ್ರವಾಸಿಗರು ಲಗ್ಗೆ ಇಡುತ್ತಿದ್ದಾರೆ. ಹಾಲ್ನೊರೆಯಂತೆ ಅಬ್ಬೆ ಫಾಲ್ಸ್ ಧುಮ್ಮುಕ್ಕುತ್ತಿದೆ. ಕಣ್ತುಂಬಿಕೊಂಡು ಟೂರಿಸ್ಟ್ ಫುಲ್ ಖುಷ್ ಆಗಿದೆ.

