ಕೊಡಗು: ಮಹಿಳಾ ಸಿಬ್ಬಂದಿಯಿಂದ ಮಹಿಳಾ ಸಿಬ್ಬಂದಿಗೆ ಜಾತಿ ನಿಂದನೆ ಆರೋಪ ಕೇಳಿಬಂದಿದ್ದು, ಎಸ್ಸಿ (ಪರಿಶಿಷ್ಟ ಜಾತಿ) ಸಮುದಾಯ ಎಂದು ಗೊತ್ತಾದ ಮೇಲೆ ಮಹಿಳಾ ಸಿಬ್ಬಂದಿಯನ್ನ ಕಿಯಾ ಕಾರ್ ಶೋರಂ ಮಾಲೀಕ ಕೆಲಸದಿಂದ ವಜಾಗೊಳಿಸಿರುವ ಘಟನೆ ಕುಶಾಲನಗರ ಕಿಯಾ ಕಾರ್ ಶೋರಂ ನಲ್ಲಿ ನಡೆದಿದೆ.
ಕುಶಾಲನಗರ ನಿವಾಸಿ ಲಿಕೀತಾ ರಿಂದ ಕಾರ್ ಶೋರಂ ಮಹಿಳಾ ಸಿಬ್ಬಂದಿ ಮೇಲೆ ಆರೋಪ ಕೇಳಿಬಂದಿದ್ದು, ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಆರೋಪದಡಿ ಹರ್ಷಿತಾ ಮತ್ತು ಮುತ್ತಮ್ಮ ಮೇಲೆ ಪ್ರಕರಣ ದಾಖಲಾಗಿದೆ.
ಪ್ರಕರಣ ದಾಖಲಾಗಿ 3 ದಿನ ಕಳೆದರು ಆರೋಪಿಗಳ ಮೇಲೆ ಪೊಲೀಸ್ ಇಲಾಖೆ ಕ್ರಮ ವಹಿಸಲಿಲ್ಲ. ಪೊಲೀಸ್ ಇಲಾಖೆ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲಸಕ್ಕೆ ಸೇರಿ ತಿಂಗಳೊಳಗೆ ಯಾವುದೇ ಕಾರಣ ನೀಡದೆ ಎಸ್ಸಿ ಜಾತಿ ಎಂಬ ಕಾರಣಕ್ಕೆ ಕೆಲಸದಿಂದ ವಜಾಗೊಳಿಸಿದ್ದಾರೆ.

ಕೆಲಸಕ್ಕೆ ಸೇರುವಾಗ ಕೆಲವು ದಾಖಲೆಗಳನ್ನು ನೀಡದ ಕಾರಣ ವಾರದ ಒಳಗೆ ಜಾತಿ ನಮೂದಿಸಿರುವ ಮೂಲ ಅಂಕ ಪಟ್ಟಿಯನ್ನು ಲಿಖಿತಾ ನೀಡಿದ್ದರು. ಅಂಕಪಟ್ಟಿಯಲ್ಲಿ ಜಾತಿ ನೋಡಿ ಒಂದೇ ದಿನದಲ್ಲಿ ಕುಶಾಲನಗರ ದಿಂದ ಮಂಗಳೂರಿಗೆ ಕರೆದು ಸಿಬ್ಬಂದಿ.
ಮೂಲ ಕಚೇರಿ ಮಂಗಳೂರಿನಲ್ಲಿದೆ. ಕಚೇರಿ ಇಬ್ಬರು ಮಹಿಳಾ ಸಿಬ್ಬಂದಿ ಪ್ರತಿ ದಿನಜಾತಿ ನಿಂದಲೆ ಮಾಡಿದ್ದಾರೆ. ನೀನು ಎಸ್ಸಿ ಜಾತಿ ನಮ್ಮ ಸರಿ ಸಮಾನಾಗಿ ಕೂರಬೇಡ , ಜೊತೆಯಲ್ಲಿ ಟೀ ಕುಡಿಯಬೇಡ, ಊಟಮಾಡಬೇಡ ಎಸ್ಸಿ ಜಾತಿ ದರಿದ್ರ ಎಂದು ಜಾತಿ ನಿಂದನೆ ಮಾಡಿ ಮಾಲೀಕನಿಗೆ ಕೆಲಸದಿಂದ ವಜಾಮಾಡಲಾಗಿದೆ ಎಂದು ಅಂಕಿತಾ ಆರೋಪಿಸಿದ್ದಾರೆ.
ನಾನು ಅಷ್ಟು ಅವಮಾನ ತಡೆದು ಜೀವನ ಮಾಡಲು ಕೆಲಸಬೇಕು ಎಂದು ಸಹಿಸಿಕೊಂಡೆ. ಆದ್ರೆ ಕೆಲಸಕ್ಕೆ ತೊಂದರೆ ಮಾಡಿದ್ದಾರೆ ನನಗೆ ನ್ಯಾಯ ಬೇಕು . ಎಸ್ಸಿ ಜಾತಿಯವರು ಕೆಲಸ ಮಾಡಬಾರದ, ಜೀವನ ಮಾಡಬಾರದ, ಬದುಕ ಬಾರದ ಎಂದು ನೊಂದ ಮಹಿಳೆಯ ಗೋಳಾಡಿದ್ದಾರೆ.

