ಕೊಡಗು : ತಿಮಿಂಗಿಲ ವಾಂತಿಯನ್ನು (ಅಂಬಗ್ರಿಸ್)ಮಾರಲು ಯತ್ನಿಸಿದ್ದು, ಕೊಡಗು ಪೊಲೀಸ್‌ರ ಕಾರ್ಯಚರಣೆಯಲ್ಲಿ ಹತ್ತು ಆರೋಪಿಗಳನ್ನು ಬಂಧಿಸಲಾಗಿದೆ.

ಕೇರಳದ ತಿರುವನಂತಪುರಂನಿಂದ ಆಂದ್ರ ಪ್ರದೇಶ ಅಥವಾ ಬೆಂಗಳೂರಿನಲ್ಲಿ ಮಾರಾಟ ಮಾಡಲು ಯತ್ನ ನಡೆಸಿದ್ದಾರೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಬೇಟೋಳಿ ಗ್ರಾಮದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

ಸುಮಾರು 10 ಕೋಟಿ ಬೆಲೆ ಬಾಳುವ ತಿಮಿಂಗಿಲ ವಾಂತಿ (ಅಂಬಗ್ರಿಸ್)ವಶ ಪಡೆಯಲಾಗಿದೆ. ಶಂಶುದ್ದೀನ್.ಎಸ್ 45 ವರ್ಷ, ಎಂ.ನವಾಜ್, 54 ವರ್ಷ, ವಿ.ಕೆ.ಲತೀಶ್, 53 ವರ್ಷ, ಜೇಶ್.ವಿ, 40 ವರ್ಷ, ಪ್ರಶಾಂತ್.ಟಿ, 52 ವರ್ಷ, ರಾಘವೇಂದ್ರ,ಎ.ವಿ. 48 ವರ್ಷ, ಬಾಲಚಂದ್ರನಾಯಕ್, 55 ವರ್ಷ. ಜೋಬಿಸ್.ಕೆ.ಕೆ. 33 ವರ್ಷ ಬಂಧಿತ ಅರೋಪಿಗಳು.

ಬಂಧಿತರಿಂದ 10 ಕೆ.ಜಿ 390 ಗ್ರಾಂ ಅಂಬರ್‌ಗ್ರೀಸ್ (ತಿಮಿಂಗಲದ ವಾಂತಿ) ಅಂದಾಜು ಮೌಲ್ಯ ರೂ. 10 ಕೋಟಿ. ಮತ್ತು ನೋಟು ಎಣಿಸುವ ಯಂತ್ರ ವಶಪಡಿಸಲಾಗಿದೆ.