ಕೊಡಗು : ಆಹಾರ ಅರಸಿ ಕಾಡಾನೆ ಅಂಗಡಿಗೆ ನುಗ್ಗಿದ ಘಟನೆ ಮೈಸೂರು ಕೇರಳ ರಾಜ್ಯ ಹೆದ್ದಾರಿ ಗೋಣಿಕೊಪ್ಪ ಸಮೀಪದ ದೇವರಪುರದ ಮುಖ್ಯ ರಸ್ತೆ ಬದಿಯಲ್ಲಿ ನಡೆದಿದೆ. ಮೈಸೂರು ರಾಜ್ಯ ಹೆದ್ದಾರಿ ದೇವರಪುರದಲ್ಲಿ ಮುಖ್ಯರಸ್ತೆ ಬದಿಯಲ್ಲಿರುವ ಕೂರ್ಗ್ ಸ್ಪೈಸಸ್ ಅಂಡ್ ಹೋಂ ನೀಡ್ಸ್ ಅಂಗಡಿಗೆ ಮಧ್ಯರಾತ್ರಿ 12 ಗಂಟೆ ಸಮಯದಲ್ಲಿ ಕಾಡಾನೆ ನುಗ್ಗಿದೆ.

ಅಂಗಡಿ ಮುಂಭಾಗದಲ್ಲಿರುವ ಹೊದಿಕೆಯನ್ನು ತಳ್ಳಿ ತರಕಾರಿ ಮಾವಿನ ಹಣ್ಣು ತಿಂದು ಕಾಡಾನೆ ಕಾಡಿಗೆ ಹೋಗಿದೆ. ಕಾಡನೆ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಮೈಸೂರು ರಾಜ್ಯ ಹೆದ್ದಾರಿಯಲ್ಲಿ ರಾತ್ರಿ ವೇಳೆ ಕಾಂಟ್ರಾಕ್ಟ್ ಬಸುಗಳು ಸೇರಿದಂತೆ ಹೆಚ್ಚಿನ ವಾಹನಗಳು ಓಡಾಡುತ್ತಿದ್ದರು ಆನೆ ಇವೆಲ್ಲವನ್ನೂ ಲೆಕ್ಕಿಸದ ಕಾಡಾನೆ ಪ್ರತಿ ವರ್ಷ ಮಳೆಗಾಲ ಅವಧಿಯಲ್ಲಿ ಈ ಭಾಗದಲ್ಲಿ ಆನೆ ರಸ್ತೆ ಮಾರ್ಗವಾಗಿ ಸಂಚರಿಸುವುದು ಸಾಮಾನ್ಯವಾಗಿದೆ.