ಕೊಡಗು : ಜಿಲ್ಲೆಯಲ್ಲಿ ಕಾಡಾನೆ ದಾಳಿ ಮುಂದುವರಿದಿದೆ. ಚಲಿಸುತ್ತಿದ್ದ ಆಟೋ ಮೇಲೆ ಕಾಡಾನೆ ದಾಳಿ ಮಾಡಿದೆ. ಪ್ರಯಾಣಿಕನಿಗೆ  ಗಂಭೀರ ಗಾಯವಾಗಿದೆ.  ಚಾಲಕ ಪ್ರಾಣಪಾಯದಿಂದ ಪಾರಾಗಿರುವ ಘಟನೆ ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಸಮೀಪ ಇಂಜಿಲಗೆರೆ ಬಳಿ ನಡೆದಿದೆ.

ಬೆಳ್ಳಂಬೆಳಗ್ಗೆ ಗ್ರಾಮಕ್ಕೆ ಕಾಡಾನೆ  ಬಂದು ಕಾಫಿ ತೋಟದಿಂದ ರಸ್ತೆಗೆ ಬಂದು ಆಟೋ ಮೇಲೆ ದಾಳಿ ಮಾಡಿದೆ. ಕಾಡಾನೆ  ದಾಳಿಯಿಂದ ಗಾಯಗೊಂಡ  ಇಂಜಿಲಗೆರೆಯ ಪ್ರದೀಪ್. ಪ್ರದೀಪ್ ಸಿದ್ದಾಪುರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಆಸ್ಪತ್ರೆಗೆ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ  ಭೇಟಿ ನೀಡಿ ಚಿಕಿತ್ಸೆ ಕೊಡಿಸಲು ಸಹಾಯ ಮಾಡಿದರು. ದಾಳಿ‌ ಮಾಡಿದ ಸ್ಥಳಕ್ಕೆ ಆರಣ್ಯ ಇಲಾಖೆ ಭೇಟಿ  ನೀಡಿದರು. ಆನೆಯನ್ನು ಕಾಡಿಗಟ್ಟುವ ಕಾರ್ಯಚರಣೆ ನಡೆಯುತ್ತಿದೆ. ಕಾಡಾನೆ ಹಾವಳಿ ತಡೆಗಟ್ಟುವಂತೆ ಸ್ಥಳೀಯರಿಂದ ಒತ್ತಾಯ ಮಾಡಲಾಗಿದೆ.