ಕೇರಳ : ಇಲ್ಲಿನ ಕಣ್ಣೂರು ಜಿಲ್ಲೆಯ 18 ವರ್ಷದ ಯುವತಿಯೊಬ್ಬಳು ಡಯಟ್ ಫಾಲೋ ಮಾಡೋ ಸಲುವಾಗಿ ಅತಿಯಾದ ಆಹಾರದ ನಿರ್ಬಂಧ, ದೀರ್ಘಕಾಲದ ಹಸಿವಿನಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕಣ್ಣೂರಿನ ಕೂತುಪರಂಬದ ನಿವಾಸಿ ಶ್ರೀನಂದ ಎಂಬ ಯುವತಿ ಈ ರೀತಿ ತನ್ನ ದೇಹದ ತೂಕ ಹೆಚ್ಚಾಗುವ ಭೀತಿಯಿಂದ ಅತಿಯಾದ ಡಯಟ್ ಮಾಡಲು ಮುಂದಾಗಿದ್ದು, ಇದ್ರಿಂದ ಅನಾರೋಫ್ಯ ಸಮಸ್ಯೆ ಕಾಣಿಸಿಕೊಂಡಿದೆ. ಆ ನಂತರ ಆಕೆಯನ್ನು ತಲಶ್ಶೇರಿಯ ಆಸ್ಪತ್ರೆಗೆ ದಾಖಲಿಸಿ ವೆಂಟಿಲೇಟರ್ ಸಪೋರ್ಟ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಆಕೆ ಕೊನೆಯುಸಿರೆಳೆದಿದ್ದಾರೆ.
ಮೃತ ಯುವತಿ ಶ್ರೀನಂದಾ ಸಂಬಂಧಿಕರ ಪ್ರಕಾರ, ಆಕೆ ತೂಕ ಹೆಚ್ಚಾಗುವ ತೀವ್ರ ಭಯದಿಂದ ಊಟ ಮಾಡೋದನ್ನೇ ಬಿಟ್ಟುಬಿಡುತ್ತಿದ್ದರು ಮತ್ತು ಅತಿಯಾದ ವ್ಯಾಯಾಮ ಮಾಡುತ್ತಿದ್ದರು ಎನ್ನಲಾಗಿದೆ. ಶ್ರೀನಂದ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳನ್ನು ನೋಡಿ ಆ ಪ್ರಕಾರ ಡಯಟ್ ಮಾಡುತ್ತಿದ್ದಳು ಎನ್ನಲಾಗಿದೆ.
ಈ ರೀತಿಯ ಡಯಟ್ ಪರಿಣಾಮ ಶ್ರೀನಂದ ಅನೋರೆಕ್ಸಿಯಾ ನರ್ವೋಸಾ ಎಂಬ ಕಾಯಿಲೆಯಿಂದ ಬಳಲುವಂತಾಗಿದೆ ಎಂದು ವೈದ್ಯಕೀಯ ತಜ್ಞರು ಶಂಕಿಸಿದ್ದಾರೆ. ಈ ರೀತಿ ಬಾಧಿತ ವ್ಯಕ್ತಿಗಳು ಕಡಿಮೆ ತೂಕದ ಹೊರತಾಗಿಯೂ ತಮ್ಮನ್ನು ತಾವು ಅಧಿಕ ತೂಕ ಎಂದು ಗ್ರಹಿಸುತ್ತಾರೆ ಮತ್ತು ತಿನ್ನುವುದನ್ನು ತಪ್ಪಿಸಲು ಪ್ರಯತ್ನಿಸುತ್ತಾರೆ.
ಈ ಪರಿಸ್ಥಿತಿ ಮುಂದುವರೆದ ನಂತರ ಎರಡು ವಾರಗಳ ಹಿಂದೆ, ಆಕೆಯ ರಕ್ತದಲ್ಲಿನ ಸಕ್ಕರೆ ಅಂಶ ಗಣನೀಯವಾಗಿ ಕಡಿಮೆಯಾಗಿ ತೀವ್ರವಾದ ಉಸಿರಾಟದ ತೊಂದರೆಗಳನ್ನು ಆಕೆ ಅನುಭವಿಸಿದ್ದು, ತಕ್ಷಣವೇ ಆಸ್ಪತ್ರೆಗೆ ಅವಳನ್ನು ಸೇರಿಸಲಾಗಿತ್ತು. ಅಂತಿಮವಾಗಿ ಯುವತಿ ಸಾನಪ್ಪಿದ್ದಾಳೆ.

