ಯಾದಗಿರಿ: ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದ ಬಸವಸಾಗರ ಡ್ಯಾಂ ನಿಂದ ಭಾರಿ ಪ್ರಮಾಣದ ನೀರು ಬಿಡುಗಡೆಯಾಗಿದ್ದು, ಕೃಷ್ಣಾ ನದಿ ತೀರದಲ್ಲಿ ಮತ್ತೆ ಪ್ರವಾಹ ಭೀತಿ ಉಂಟಾಗಿದೆ.

ಡ್ಯಾಂನ 25 ಗೇಟ್ ಓಪನ್ ಮಾಡಿ ಕೃಷ್ಣಾ ನದಿಗೆ 1,20,800 ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಜಲಾಶಯಕ್ಕೆ 1,10,000 ಕ್ಯುಸೆಕ್ ನೀರು ಒಳಹರಿವಿದೆ. 33.33 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಇಂದು 30.83 ಟಿಎಂಸಿ ನೀರು ಸಂಗ್ರಹವಿದೆ.

ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಳ ಹಿನ್ನಲೆ ನೀರು ಬಿಡುಗಡೆ ಪ್ರಮಾಣ ಏರಿಕೆಯಾಗಿದೆ. ನದಿ ತೀರಕ್ಕೆ ತೆರಳದಂತೆ ಎಚ್ಚರಿಕೆ ನೀಡಿದರೂ ಡ್ಯಾಂ ಮುಂಭಾಗದಲ್ಲಿಯೇ ಮೀನುಗಾರರು ಹುಚ್ಚಾಟ ನಡೆಸಿದ್ದಾರೆ.