ವಿಜಯನಗರ: ಕಮಲಾಪುರ ಸುತ್ತು ಮುತ್ತಲಿನ ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕವಾಗಿ ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಕಲ್ಪಿಸಲು ಹಾಗೂ ಕಾಲೇಜು ಆವರಣದಲ್ಲಿ ಸಿ.ಸಿ ಕ್ಯಾಮರಾ ಅಳವಡಿಸುವಂತೆ ಹಾಗೂ ಮೂಲ ಸೌಕರ್ಯ ಒದಗಿಸಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್ ತಾಲೂಕು ಸಮಿತಿ ನೇತೃತ್ವದಲ್ಲಿ ಕಮಲಾಪುರದ ಪುರಸಭೆಯ ಮುಖ್ಯಧಿಕಾರಿಗಳಾದ ಡಿ. ಈರಣ್ಣ ಮತ್ತು ಬಸ್ ನಿಲ್ದಾಣ ಅಧಿಕಾರಿಗಳು ಪಿ.ವಾಸುದೇವ್ ಕೆ,ಡಿ,ಪಿ, ಮೆಂಬರ್ ಕಾಳಪ್ಪ ಅವರಿಗೆ ಮನವಿ ಪತ್ರವನ್ನು ಕೊಡಲಾಯಿತು.
ಈ ಸಂದರ್ಭದಲ್ಲಿ SFI ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಶಿವರೆಡ್ಡಿ ಮಾತನಾಡಿ ಕಮಲಾಪುರುದ ಸುತ್ತು ಮುತ್ತಲಿನ ಗ್ರಾಮೀಣ ಪ್ರದೇಶದಿಂದ ಅತಿ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಕಮಲಾಪುರುದ ಕಾಲೇಜಿಗೆ ಬರುತ್ತಿದ್ದಾರೆ ಆದರೆ ಸರಿಯಾದ ಸಮಯಕ್ಕೆ ಬಸ್ ಇಲ್ಲದ ಕಾರಣಕ್ಕೆ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದಿಂದ ದೂರ ಉಳಿಯುವ ಪರಿಸ್ಥಿತಿ ಬಂದಿದೆ ಹಾಗಾಗಿ ಅದಕ್ಕೆ ಅವಕಾಶ ಕೊಡದೆ ಗ್ರಾಮೀಣ ಪ್ರದೇಶಗಳಿಗೆ ಸಮಯಕ್ಕೆ ಸರಿಯಾಗಿ ಮತ್ತು ಬಸ್ ಇಲ್ಲದ ಹಳ್ಳಿಗಳಿಗೆ ಕೂಡುಲೆ ಬಸ್ ಬೇಡಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್ SFI ಅಗ್ರಹಿಸುತ್ತದೆ ಎಂದು ಒತ್ತಾಯ ಮಾಡಿದರು.
ಅದೇ ರೀತಿಯಾಗಿ SFI ಜಿಲ್ಲಾ ಸಹಕಾರ್ಯದರ್ಶಿಯಾದ ಕೆ.ಎ. ಪವನ್ ಕುಮಾರ್ ಮಾತನಾಡಿ ಕಾಲೇಜು ಇಲ್ಲದ ಸಮಯದಲ್ಲಿ ಪುಂಡ ಪೊಕಾರಿಗಳು ಕಾಲೇಜಿನ ಆವರಣದಲ್ಲಿ ಡ್ರಿಂಕ್ಸ್ ಮತ್ತು ಇತ್ಯಾದಿ ಚಟುವಟಿಕೆಯನ್ನು ಮಾಡುತ್ತಿದ್ದಾರೆ ಮತ್ತು ಕಾಲೇಜು ಗೋಡೆಗಳಲ್ಲಿ ಅಸಭ್ಯವಾಗಿ(ಅಶ್ಲೀಲ) ಬರೆಯುತ್ತಿದ್ದಾರೆ. ಹಾಗಾಗಿ ಇದಕ್ಕೆಲ್ಲಾ ಕಡಿವಣ ಹಾಕಲು SFI ಒತ್ತಾಯಿಸುತ್ತದೆ ಮತ್ತು ಶಾಲಾ – ಕಾಲೇಜು ಒಂದೇ ಆವರಣದಲ್ಲಿ ಇರವುದರಿಂದ ಕಾವಲುಗಾರನನ್ನು ನೇಮಕ ಮಾಡಬೇಕು. ಕಾಲೇಜಿನ ಆವರಣದಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕೆಂದು ಈ ಮೂಲಕ SFI ಸಂಘಟನೆಯು ಒತ್ತಾಯ ಮಾಡುತ್ತೇದೆ .
ಈ ಕೆಳಗಿನ ವಿವರಗಳಂತೆ ಗ್ರಾಮೀಣ ಪ್ರದೇಶಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಲು ವಿನಂತಿ.
ಬೇಡಿಕೆಗಳು.
1. ನಲ್ಲಾಪುರು ದಿಂದ ಕಮಲಾಪುರಕ್ಕರ( ಬೆಳಿಗ್ಗೆ 9:00 ಗಂಟೆಗೆ ಮತ್ತು ಸಾಯಂಕಾಲ 4 ಗಂಟೆಗೆ) ಬಸ್ ಬಿಡುವುದು.
2. ಏನ್. ಆರ್ ಕ್ಯಾಂಪ್ ದಿಂದ ಕಮಲಾಪುರಕ್ಕೆ(ಬೆಳಿಗ್ಗೆ 9:00 ಗಂಟೆಗೆ ಮತ್ತು ಸಾಯಂಕಾಲ 4:00 ಗಂಟೆಗೆ)
3. ಕೇರೆ ತಾಂಡ ದಿಂದ ಕಮಲಾಪುರಕ್ಕೆ(ಬೆಳಿಗ್ಗೆ 9:00 ಗಂಟಿಗೆ ಮತ್ತು ಸಾಯಂಕಾಲ 4:00 ಗಂಟೆಗೆ)
4. ಸುಗ್ಗಿನಳ್ಳಿ ಯಿಂದ ಕಮಲಾಪುರ(ಬೆಳಿಗ್ಗೆ 9:00 ಗಂಟೆಗೆ ಮತ್ತು ಸಾಯಂಕಾಲ 4 ಗಂಟೆಗೆ )
5. ಕಮಲಾಪುರ TO ಚಿನ್ನಪುರು (ಸಾಯಂಕಾಲ 4:00 ಗಂಟೆಗೆ)
6. 76 ವೆಂಕಟಪುರು ದಿಂದ ಕಮಲಾಪುರ(ಬೆಳಿಗ್ಗೆ 9:00 ಗಂಟೆಗೆ ಮತ್ತು ಸಾಯಂಕಾಲ 4:00 ಗಂಟೆಗೆ)
7. ಕ್ರೀಡಾಂಗಣ ಮತ್ತು ಕ್ರೀಡಾ ಸಾಮಾಗ್ರಿಗಳನ್ನು ಪುರಸಭೆ ಅನುದಾನದಲ್ಲಿ ನೀಡಬೇಕು.
ಈ ಸಂದರ್ಭದಲ್ಲಿ ಕಾಲೇಜು ಘಟಕದ ಅಧ್ಯಕ್ಷರಾದ ಹರಿಪ್ರಿಯಾ, ಕಾರ್ಯದರ್ಶಿಯಾದ ದುರ್ಗೇಶ್, ಉಪಾಧ್ಯಕ್ಷರಾದ ಸುಭಾಸ್, ಸುಲಚನ, ಮೋಹಿನಿ ಶ್ರೀನಿಧಿ, ಸಹಕಾರ್ಯದರ್ಶಿಗಳಾದ ಕೇಶವ, ರಮೇಶ್, ಅಜಯ ಸದ್ಯಸರಾದ ವೀರೇಶ್, ನಾಗರಾಜ್, ಮಾರೆಮ್ಮ ಮತ್ತು ಇತರರು ನುರೂರು ವಿದ್ಯಾರ್ಥಿಗಳು ಭಾಗವಹಿಸಿದ್ದರು

