2025ರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ವೀಣೆ ತಯಾರಕ ದೊಡ್ಡಬಳ್ಳಾಪುರದ ತಾಲ್ಲೂಕಿನ ಸಿಂಪಾಡಿಪುರದ ಪೆನ್ನ ಓಬಳಯ್ಯ ಭಾನುವಾರ ತಡರಾತ್ರಿ ನಿಧನರಾದರು.

ಶನಿವಾರವಷ್ಟೇ ಪೆನ್ನ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಮಾಡಲಾಗಿತ್ತು. ಪೆನ್ನ ಅವರಿಗೆ ಮೂವರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಸಿಂಪಾಡಿಪುರದಲ್ಲಿ ವೀಣೆ ತಯಾರಿಕೆಯನ್ನು ಆರಂಭಿಸಿದ್ದ ಪೆನ್ನ ಅವರು 50 ವರ್ಷಗಳಿಂದ ವೀಣೆ ತಯಾರಿಸುತ್ತಿದ್ದು, ತಮ್ಮ ಗ್ರಾಮದಲ್ಲಿ ಇತರೆ ಆಸಕ್ತಿಗೂ ವೀಣೆ ತಯಾರಿ ಕಲಿಸಿದ್ದರು.

ಸಿಂಪಾಡಿಪುರದಲ್ಲಿ ವೀಣೆಗಳು ತಯಾರಾಗುವ ಕರ್ನಾಟಕದ ಏಕೈಕ ಊರಾಗಿದ್ದು, ಇಲ್ಲಿ ತಯಾರಾಗುವ ವೀಣೆಗಳು ಸಂಗೀತ ವಿದ್ಯಾರ್ಥಿಗಳ ಕೈಸೇರಿದೆ. ತಂಜಾವೂರಿನ ವೀಣೆಗಳಿಗೆ ಇಲ್ಲದ ಎರಡು ವಿಶೇಷ ಸಿಂಪಾಡಿಪುರದ ವೀಣೆಗಳಿಗಿದೆ ಎನ್ನಲಾಗಿದೆ. ಹಾಗೆಯೇ ಈ ವೀಣೆಗಳ ತಯಾರಿಕೆಗೆ ಯಂತ್ರಗಳ ಬಳಕೆ ಮಾಡಲಾಗುವುದಿಲ್ಲ.