ಉತ್ತರ ಕನ್ನಡ : ಸಮುದ್ರದಲ್ಲಿ ಆಟ ಆಡುವ ವೇಳೆ ಅಲೆಗಳ ಸೆಳೆತಕ್ಕೆ ಕೊಚ್ಚಿ ಹೋಗುತ್ತಿದ್ದ ಐವರನ್ನು ಸ್ಥಳದಲ್ಲಿದ್ದ ಲೈಫ್ ಗಾರ್ಡ್ ಸಮಯ ಪ್ರಜ್ಞೆ ಮೆರೆದು ಕಾಪಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಪ್ರೌಢಶಾಲೆ ವಿದ್ಯಾರ್ಥಿಗಳು ಪ್ರವಾಸಕ್ಕೆ ಬಂದಿದ್ದ ವೇಳೆ ಸಮುದ್ರದಲ್ಲಿ ಶಿಕ್ಷಕ ಸೇರಿದಂತೆ ನಾಲ್ಕು ವಿದ್ಯಾರ್ಥಿಗಳು ಕೊಚ್ಚಿ ಹೋಗುತ್ತಿದ್ದರು. ಸಮುದ್ರದ ನೀರಿನಲ್ಲಿ ಶಿಕ್ಷಕ ಸೇರಿದಂತೆ ನಾಲ್ವರು ವಿದ್ಯಾರ್ಥಿಗಳು ಅಪಾಯಕ್ಕೆ ಸಿಲುಕಿದ್ದನ್ನು ಗಮನಿಸಿದ ಲೈಫ್ಗಾರ್ಡ್ ಸಿಬ್ಬಂದಿ ಕೂಡಲೇ ಸಹಾಯಕ್ಕೆ ಧಾವಿಸಿ ಎಲ್ಲರನ್ನೂ ಸುರಕ್ಷಿತವಾಗಿ ತೀರಕ್ಕೆ ಕರೆತಂದಿದ್ದಾರೆ.
ವಿದ್ಯಾರ್ಥಿಗಳಾದ ಮೊಹಮ್ಮದ್ ಜಿಲಾಲ್(15), ನಿಯಾಜ್(15), ಆಕಾಶ್(15) ಸೇರಿ ಇನ್ನೋರ್ವ ವಿದ್ಯಾರ್ಥಿ ಸೇರಿ ಶಿಕ್ಷಕನನ್ನೂ ರಕ್ಷಣೆ ಮಾಡಲಾಗಿದೆ. ಲೈಫ್ಗಾರ್ಡ್ ಸಿಬ್ಬಂದಿ ದರ್ಶನ್ ಹರಿಕಾಂತ್, ಚಿದಾನಂದ ಲಕ್ಕುಮನೆ, ದೀಪಕ್ ಗೌಡ, ಅಶೋಕ್ ಹರಿಕಾಂತ್, ಮಹೇಶ್ ಮತ್ತು ಜಗ್ಗು ರಕ್ಷಣೆ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.

