ಕಾರವಾರ: ಶಿರೂರು ದುರಂತದಿಂದ ಉಳುವರೆ ಗ್ರಾಮದಲ್ಲಿ ಮನೆ ಕಳೆದುಕೊಂಡವರ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ವಯನಾಡಿನಲ್ಲಿ 100 ಮನೆಗಳನ್ನು ಕಟ್ಟಿಕೊಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಾರವಾರದಲ್ಲಿ ಪ್ರಣವಾನಂದ ಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ.

ಉಳುವರೆ ಗ್ರಾಮದಲ್ಲಿ ಮನೆ ಕಳೆದುಕೊಂಡವರಿಗೆ ಕೇವಲ 1 ಲಕ್ಷದ 20 ಸಾವಿರ ಹಣ ಮಾತ್ರ ಕೊಡಲಾಗುತ್ತಿದೆ. ರಾಹುಲ್ ಗಾಂಧಿಯ ಓಲೈಕೆ ಮಾಡಲು ಮನೆ ಕಟ್ಟಿಕೊಡಲು ಮುಂದಾಗಿದೆ. ಆದರೆ ರಾಜ್ಯದ ಜನರಿಗೆ ಮಾತ್ರ 1 ಲಕ್ಷ 20 ಸಾವಿರ ಪರಿಹಾರ ಕೊಡುತ್ತಾರೆ.  ಉಳುವರೆ ಗ್ರಾಮದಲ್ಲಿ ಮನೆ ಕಳೆದುಕೊಂಡವರಿಗೆ ಯಾಕೆ ಮನೆ ಕಟ್ಟಿ ಕೊಡುತ್ತಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ದ ಪ್ರಣವಾನಂದ ಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.