ಉತ್ತರಕನ್ನಡ: ಹೊಟೇಲ್ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ಮಾಡಿ ನಾಲ್ವರ ಬಂಧಿಸಿದ ಘಟನೆ ಇಂದು(ಭಾನುವಾರ) ಜಿಲ್ಲೆಯ ಮುರ್ಡೇಶ್ವರದಲ್ಲಿ ನಡೆದಿದೆ. ಮುರ್ಡೇಶ್ವರದ ಬಸ್ತಿಮಕ್ಕಿಯ ಐ ಲ್ಯಾಂಡ್ ಹೊಟೇಲ್ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದಾರೆ. ದಾಳಿ ವೇಳೆ ಹೈಟೆಕ್ ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಂಡ ನಾಲ್ವರನ್ನ ಬಂಧಿಸಲಾಗಿದೆ.
ಇನ್ನು ಈ ದಾಳಿಯನ್ನುಉತ್ತರಕನ್ನಡ ಜಿಲ್ಲಾ ಎಸ್ಪಿ ನಾರಾಯಣ ಸೂಚನೆ ಮೇರೆಗೆ ಸಿಇಎನ್ ಡಿಎಸ್ಪಿ ಅಶ್ವಿನಿ ನೇತೃತ್ವದಲ್ಲಿ ನಡೆದಿದೆ. ಪೊಲೀಸರು ಹೊಟೇಲ್ ಒಳಗೆ ಹೊಕ್ಕುತ್ತಿದ್ದಂತೇ ಹೊಟೇಲ್ ಸಿಬ್ಬಂದಿ ಕಕ್ಕಾಬಿಕ್ಕಿಯಾಗಿದ್ದಾರೆ. ಪೊಲೀಸರು ಆಗಮಿಸುತ್ತಿದ್ದಂತೇ ವೇಶ್ಯಾವಾಟಿಕೆಗೆ ಬಳಸುತ್ತಿದ್ದ ಮಹಿಳೆಯರ ಜತೆ ಕೆಲವರು ಪರಾರಿಯಾಗಿದ್ದಾರೆ.

