ಉತ್ತರ ಕನ್ನಡ: ಅಂಕೋಲಾ ಭೂಕುಸಿತ ಪ್ರಕರಣದಿಮದಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಆತಂಕ ಮನೆ ಮಾಡಿದೆ. ಇದೇ ವೇಳೆ ಗಂಗಾವಳಿ ನದಿಯಲ್ಲಿ ಟ್ಯಾಂಕರ್ ತೇಲುತ್ತಿರುವುದರಿಂದ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ವಾಸರಕುದ್ರಿಗೆ ಗ್ರಾಮ ಪಂಚಾಯತ ವ್ಯಾಪ್ತಿಗೆ ಬರುವ ಕೊಡ್ಲಣಿ ಗ್ರಾಮದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ-66 (NH-66) ಪಕ್ಕದ ಗುಡ್ಡ ಕುಸಿದಿದೆ. ಗುಡ್ಡದ ಬಳಿಯ ಹೋಟೆಲ್ ಹಾಗೂ ಮನೆಯ ಸದಸ್ಯರು ಹಾಗೂ ಜಿಲ್ಲೆಯೇ ಹೋಟೆಲ್ ಮುಂಭಾಗದಲ್ಲಿ ನಿಲ್ಲಿಸಿದ ಅಡುಗೆ ಅನೀಲ ಟ್ಯಾಂಕರ ಕೂಡ ಭೂಕುಸಿತದಿಂದ ಉಂಟಾದ ರಭಸಕ್ಕೆ ಗಂಗಾವಳಿ ನದಿಯಲ್ಲಿ ಟ್ಯಾಂಕರ್ ಬಿದ್ದಿದೆ.

ಟ್ಯಾಂಕರ್‌ನಿಂದ ಅನಿಲ ಸೋರಿಕೆಯಾಗಬಹುದಾದ ಸಾಧ್ಯತೆ ಇರುವುದರಿಂದ ಅದನ್ನು ತಡೆಗಟ್ಟುವ ಬಗ್ಗೆ NDRF, Navy ಹಾಗೂ ಆಗ್ನಿಶಾಮಕ ತಂಡಗಳು ಜಂಟಿಯಾಗಿ NHAI, IRB ಜೊತೆಗುಡಿ ಕಾರ್ಯಾಚರಣೆ ನಡೆಸುತ್ತಿರುವುದರಿಂದ ಕಾರ್ಯಾಚರಣೆಗೆ ತೊಂದರೆಯಾಗದಂತೆ ಅನಿಲ ಸೋರಿಕೆಯಾದಲ್ಲಿ ಸಂಭವಿಸಬಹುದಾದ ದುರ್ಘಟನೆಯನ್ನು ತಡೆಗಟ್ಟುವಲ್ಲಿ ಜಿಲ್ಲಾಡಳಿತ ಕ್ರಮಗೊಳ್ಳುತ್ತಿದೆ.