ಉತ್ತರಕನ್ನಡ: ಶಿರೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಂತ್ರಸ್ತರ ಶೋಧ ಕಾರ್ಯ ಮುಂದುವರೆದಿದೆ. ಇನ್ನು ಲಾರಿ ಸಮೇತ ನೆಲದಡಿಯಲ್ಲಿ ಹೂತು ಹೋಗಿದ್ದ ಕೇರಳ ನಿವಾಸಿ ಅರ್ಜುನ್​ಗಾಗಿ ಕಳೆದ ಕೆಲ ದಿನಗಳಿಂದ ಶೋಧ ಕಾರ್ಯ ನಡೆಯುತ್ತಲೇ ಇದೆ.

ಸದ್ಯ ಈಗ ಅರ್ಜುನ್ ಬದುಕಿರುವ ಬಗ್ಗೆ ಸುಳಿವು ಸಿಕ್ಕಿದೆ. ಆತನ ಫೋನ್ ಹಾಗೂ ಲಾರಿ ಇಂಜೆನ್ ಆನ್​ ಇರುವ ಬಗ್ಗೆ ಮಾಹಿತಿ ಸಿಕ್ಕಿದೆ. ಅರ್ಜುನ್ ಕುಟುಂಬ ಸದಸ್ಯರು ಆಶಾಭಾವನೆ ಹೊರ ಹಾಕಿದ್ದಾರೆ. ಇನ್ನು ಮತ್ತೊಂದೆಡೆ ಸರ್ಕಾರ ಮತ್ತು ಸಚಿವರ ವಿರುದ್ಧ ಲಾರಿ ಅಸೋಸಿಯೇಷನ್ ಆಕ್ರೋಶ ಹೊರ ಹಾಕಿದೆ.

ಗುಡ್ಡ ಕುಸಿತ ಸಂಭವಿಸಿ ಅರ್ಜುನ್ ಲಾರಿ ಸಮೇತ ನೆಲದಡಿಯಲ್ಲಿ ಹೂತು ಹೋಗಿದ್ದು ಜುಲೈ 18ರ ಗುರುವಾರ ರಾತ್ರಿಯ ವರೆಗೂ ಲಾರಿ ಇಂಜನ್ ಚಾಲನೆಯಲ್ಲಿತ್ತು. ಹಾಗೂ ಶುಕ್ರವಾರ ಬೆಳಗ್ಗೆ ಅರ್ಜುನ್‌ನ ಫೋನ್ ರಿಂಗ್ ಆಗಿದೆ. ರೇಂಜ್ ಸಿಕ್ಕಾಗಲೆಲ್ಲ ಫೋನ್ ಆಕ್ಟಿವ್ ಆಗಿದೆ. ಇದರ ಅರ್ಥ ಅವರು ಎಲ್ಲೋ ಒಂದು ಕಡೆ ಬದುಕಿದ್ದಾರೆ ಎಂದು ಅರ್ಜುನ್ ಪತ್ನಿ ಕೃಷ್ಣಪ್ರಿಯಾ ಅವರು ಕೇರಳದ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಹೀಗಾಗಿ ಲಾರಿಯು ಗುಡ್ಡ ಕುಸಿತ ಅವಶೇಷದಲ್ಲಿ ಸಿಲುಕಿರದೇ ಬೇರೆ ಕಡೆಯೂ ಇರುವ ಸಾಧ್ಯತೆ ಇದೆ ಎಂದು ಕುಟುಂಬಸ್ಥರು ಸಂಶಯ ಹೊರ ಹಾಕಿದ್ದಾರೆ. ಇನ್ನು ಅರ್ಜುನ್ ಬದುಕಿರುವ ಸಾಧ್ಯತೆಗಳು ಹೆಚ್ಚಿವೆ. ನಮ್ಮ ಕಸಿನ್ ಕಾಲ್ ಮಾಡಿದಾಗ ಫೋನ್ ಶುಕ್ರವಾರ ಬೆಳಗ್ಗೆ ಸ್ವೀಟ್ಸ್ ಆಫ್ ಆಗಿದೆ. ಕಾರ್ಯಾಚರಣೆಗೆ ಸೇನೆ ಕರೆಸಬೇಕು ಎಂದು ಕಾಣೆಯಾಗಿರುವ ಅರ್ಜುನ್ ಸಹೋದರಿ ತಿಳಿಸಿದ್ದಾರೆ.