ಅಂಕೋಲಾ: ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ನಿನ್ನೆಯ ತನಕ ನಾಲ್ಕು ಮೃತದೇಹ ಸಿಕ್ಕಿತ್ತು. ಆದರಿಂದು ಮತ್ತೆ ಮೂರು ಮೃತದೇಹ ಪತ್ತೆಯಾಗಿದೆ.ಗಂಗಾವಳಿ ನದಿಯಲ್ಲಿ ಇಬ್ಬರು ಲಾರಿ ಚಾಲಕರ ಮೃತದೇಹ ಸಿಕ್ಕಿದೆ. ಅದರಲ್ಲೊಬ್ಬರನ್ನು ಗ್ಯಾಸ್ ಟ್ಯಾಂಕರ್ ಚಾಲಕ ಮುರುಗನ್ ಮೃತದೇಹ ಎಂದು ಗುರುತಿಸಲಾಗಿದೆ.
ಶಿರೂರು ಗುಡ್ಡ ಕುಸಿತದ ವೇಳೆ ಲಾರಿ ಸಮೇತ 45 ವರ್ಷದ ಮುರುಗನ್ ನೀರಿಗೆ ಬಿದ್ದಿದ್ದಾರೆ ಎಂದು ಅಂದಾಜಿಸಲಾಗಿದೆ. ಅಂಕೋಲಾ ತಾಲೂಕಿನ ಮಂಜಗುಣಿ ಬಳಿಯಲ್ಲಿ ಸಿಕ್ಕಿದೆ. ಇಲ್ಲಿಯವರೆಗೆ 7 ಮೃತದೇಹ ಸಿಕ್ಕಿದೆ. ಸದ್ಯ ನದಿಯಲ್ಲಿ ಹುಡುಕಾಟದ ಕಾರ್ಯಾಚರಣೆ ಮುಂದುವರೆದಿದೆ.

