ಉತ್ತರ ಕನ್ನಡ: ಎರಡು ತಿಂಗಳಿಂದ ಅಬ್ಬರಿಸಿ ಬೊಬ್ಬಿರಿದಿದ್ದ ಮಳೆ, ಇನ್ನೇನು ಕಡಿಮೆಯಾಯಿತು ಎನ್ನುವಾಗಲೇ ಅರಬ್ಬಿ ಸಮುದ್ರ ಪ್ರಕ್ಷುಬ್ಧವಾಗಿದೆ. ಆಗಸ್ಟ್ 01 ರಿಂದ ಮೀನುಗಾರಿಕೆ ಪ್ರಾರಂಭವಾಗಿತ್ತು. ಉತ್ತಮ ಮತ್ಸ್ಯ ಭೇಟೆ ನಿರೀಕ್ಷೆಯಲ್ಲಿದ್ದ ಮೀನುಗಾರರು ಸಮದ್ರಕ್ಕಿಳಿದು ಮೀನುಗಾರಿಕೆ ಪ್ರಾರಂಭಿಸಿದ ಕೆಲವೇ ದಿನದಲ್ಲಿ ಮೀನುಗಾರಿಕೆ ಬಂದ್ ಮಾಡುವ ಸ್ಥಿತಿ ಬಂದೊದಗಿದೆ.
ಆ.24 ರಿಂದ 26 ರ ವರೆಗೆ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿ 35 ರಿಂದ 45 ಕಿಲೋಮೀಟರ್ ವೇಗದಲ್ಲಿ ಗಾಳಿ ಬಿಸುವ ಸಾಧ್ಯತೆ ಇದೆ. ಹೀಗಾಗಿ ಆಳ ಸಮುದ್ರಕ್ಕೆ ತೆರಳಿದ ರಾಜ್ಯ, ಹೊರರಾಜ್ಯದ ಮೀನುಗಾರಿಕಾ ಬೋಟುಗಳು ಬಂದರಿನಲ್ಲಿ ಲಂಗುರು ಹಾಕುತ್ತಿವೆ.
ಆಗಸ್ಟ್ ಮೊದಲ ವಾರದಲ್ಲಿ ಆಳ ಸಮುದ್ರದ ಮೀನುಗಾರಿಕೆಗೆ ತೆರಳಿದ ಮೀನುಗಾರರು, ತಮ್ಮ ಬೋಟುಗಳನ್ನು ತೀರದತ್ತ ತಿರುಗಿಸಿದ್ದಾರೆ. ಉತ್ತಮ ಮತ್ಸ್ಯ ಭೇಟೆಯ ನಿರೀಕ್ಷೆಯಲ್ಲಿ ಆಳ ಸಮುದ್ರಕ್ಕೆ ತೆರಳಿದ್ದ ಮೀನುಗಾರರಿಗೆ ವಾಯುಭಾರ ಕುಸಿತದಿಂದ ಮೀನುಗಾರಿಕೆ ನಡೆಸಲು ವಿಘ್ನವಾಗಿದೆ. ಹೀಗಾಗಿ ಇತ್ತ ಮೀನುಗಳಿಲ್ಲದೇ ಸುರಕ್ಷತೆಗಾಗಿ ಬಂದರಿನಲ್ಲಿ ತಮ್ಮ ಬೋಟುಗಳನ್ನು ಲಂಗುರು ಹಾಕಿದ್ದು, ಈ ಬಾರಿ ಸಮುದ್ರದಲ್ಲಿ ಎದ್ದ ಥೂಫಾನ್ನಿಂದ ಉತ್ತಮ ಮೀನುಗಳು ಸಿಗದೇ ನಷ್ಟ ಹೊಂದುವಂತಾಗಿದೆ.

