ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಬೃಹತ್ ಗುಡ್ಡ ಕುಸಿದು ಬಿದ್ದು ಸುಮಾರು 7 ಮಂದಿ ಮೃತಪಟ್ಟಿದ್ದು, ಇನ್ನಷ್ಟು ಮಂದಿ ಅವಶೇಶಗಡಳಡಿ ಸಿಲುಕಿದ್ದಾರೆ. ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ.

ಈ ಮಧ್ಯೆ, ಸಾಕು ನಾಯಿಯೊಂದು ಮಾಲೀಕರು ಈಗ ಬರಬಹುದು ಎಂದು ಕಾದು ಕುಳಿತಿರುವ ದೃಶ್ಯ ಸ್ಥಳದಲ್ಲಿದ್ದವರ ಮನಕಲಕುವಂತೆ ಮಾಡಿದೆ.

ನಿತ್ಯವೂ ತನಗೆ ಆಹಾರ ನೀಡುತ್ತಿದ್ದ ಮಾಲೀಕ, ತನ್ನನ್ನು ಮನೆ ಸದಸ್ಯನಂತೆ ನೋಡಿಕೊಳ್ಳುತ್ತಿದ್ದಾತ ಇಂದು ಎಲ್ಲಿ ಹೋದರು ಎಂದು ಸಾಕು ನಾಯಿ ಪರದಾಡುತ್ತಿದ್ದ ದೃಶ್ಯ ಸ್ಥಳದಲ್ಲಿದ್ದವರ ಕಣ್ಣಂಚಲ್ಲಿ ನೀರು ತರಿಸುವಂತಿತ್ತು.