ಶಿರಸಿ: ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಓರ್ವ ಸಾವನ್ನಪ್ಪಿರುವ ಘಟನೆ ಸಿದ್ದಾಪುರ ತಾಲೂಕಿನ ಆಡುಕಟ್ಟಾದ ಗುಡ್ಡೆಕಣ ಬಳಿ ನಡೆದಿದೆ.
ಹಲಗೇರಿಯ ದೇವರಾಜ್ (53) ಮೃತಪಟ್ಟ ದುರ್ದೈವಿ. ಚಲಿಸುತ್ತಿದ್ದ ಕಾರಿನ ಅರ್ಧಭಾಗಕ್ಕೆ ಏಕಾಏಕಿ ಮರ ಬಿದ್ದಿದೆ. ಚಾಲಕನ ಪಕ್ಕ ಕುಳಿತುಕೊಂಡಿದ್ದ ಸಹಸವಾರ ಹಲಗೇರಿಯ ದೇವರಾಜ್ ಎಂಬಾತ ಸಾವನ್ನಪ್ಪಿದ್ದಾರೆ.
ಆಡುಕಟ್ಟಾದಿಂದ ಸಾಗರ ಕಡೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಆ ಕಾರಿನಲ್ಲಿ ಮೂರು ಜನ ಪ್ರಯಾಣಿಸುತ್ತಿದ್ದರು. ಸದ್ಯ ಕಾರಿನಲ್ಲಿದ್ದ ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

