ಉಡುಪಿ: ಮೈಸೂರು ದಸರಾದಲ್ಲಿ ಕಂಬಳ ವಿವಾದಕ್ಕೆ ರಾಜ್ಯ ಕಂಬಳ ಸಮಿತಿ ಅಧ್ಯಕ್ಷ ದೇವಿ ಪ್ರಸಾದ ಶೆಟ್ಟಿ ಹೇಳಿಕೆ ನೀಡಿದ್ದಾರೆ. ದಸರಾ ನಮ್ಮ ನಾಡ ಹಬ್ಬ ನಾಡಹಬ್ಬದಲ್ಲಿ ಕಂಬಳ ಮಾಡಿದರೆ ತಪ್ಪೇನು. ರಾಜ್ಯದ ಘನತೆ ಗೌರವ ಹೆಚ್ಚಿಸುವ ಕ್ರೀಡೆ. ನಾಡಹಬ್ಬದಲ್ಲಿ ಕಂಬಳ ಆಚರಿಸಬೇಕು ಅನ್ನೋದು ಸರಕಾರದ ಬಯಕೆ. ರಾಜ್ಯ ಸರಕಾರ ಕ್ರೀಡೆಯ ಮಾನ್ಯತೆ ನೀಡಿದೆ. ಕಂಬಳ ಅಸೋಸಿಯೇಷನ್ ಕೂಡ ಮಾಡಿದೆ ಎಂದರು.

ರಾಜ್ಯದ ಯಾವುದೇ ಮೂಲೆಯಲ್ಲಿ ಕಂಬಳ ಮಾಡಬಹುದು ಎಂದು ಉಚ್ಚ ನ್ಯಾಯಾಲಯ ತೀರ್ಪು ಕೊಟ್ಟಿದೆ. ದಕ್ಷಿಣ ಕನ್ನಡ ಉಡುಪಿ ಮಾತ್ರವಲ್ಲದೆ ಕಾಸರಗೋಡಿನಲ್ಲೂ ಕೂಡ ಕಂಬಳ ನಡೆದಿದೆ. ಕಂಬಳ ವ್ಯಕ್ತಿ ಪಕ್ಷ ಧರ್ಮಕ್ಕೆ ಸೀಮಿತವಲ್ಲ. ಜಾತಿ ಮತ ಭೇದವಿಲ್ಲದೆ ಬಡವ ಬಲ್ಲಿದರು ಒಟ್ಟಾಗಿ ಆಚರಿಸುವ ಕಂಬಳ. ಹಿಂದೂ ಮುಸ್ಲಿಂ ಕ್ರೈಸ್ತ ಎಲ್ಲರೂ ಕಂಬಳದ ಕೋಣ ಸಾಕುತ್ತಾರೆ. ರಾಜ್ಯದ ಜನತೆ ಈ ಕ್ರೀಡೆಯನ್ನು ನೋಡಬೇಕು.

ಕಂಬಳ ಸಾಮರಸ್ಯಕ್ಕೆ ಒತ್ತು ನೀಡುವ ಕ್ರೀಡೆ ಆಗಬೇಕು. ಸಂಪ್ರದಾಯ ಸಂಸ್ಕೃತಿಗೆ ಯಾವುದೇ ಧಕ್ಕೆ ಇಲ್ಲ. ನಮ್ಮ ಸಂಪ್ರದಾಯಕ್ಕೂ ಮೈಸೂರು ಆಚರಣೆಗಳಿಗೂ ವ್ಯತ್ಯಾಸವಿಲ್ಲ. ನಾವು ಅಕ್ಕ ಪಕ್ಕದ ಜಿಲ್ಲೆಯವರೇ, ಮೈಸೂರು ಅರಸರ ಕಾಲದಲ್ಲೂ ಕಂಬಳ ನಡೆದಿದೆ. ನಾಲ್ವಡಿ ಕೃಷ್ಣರಾಜ ಒಡೆಯರು ಕಂಬಳಕ್ಕೆ ಸಾಕಷ್ಟು ಸಹಕಾರ ನೀಡಿದ್ದಾರೆ. ಬಾರ್ಕೂರು ಸಂಸ್ಥಾನದಲ್ಲೂ ಕಂಬಳ ನಡೆಯುತ್ತಿತ್ತು. ಅರಮನೆ ಬಿಡುಗಳಿದ್ದ ಸ್ಥಳದಲ್ಲಿ ಕಂಬಳ ನಡೆದಿದೆ.

ಹಿಂದೆ ಒಂಟಿಕೆರೆಯಲ್ಲಿ ಕಂಬಳ ನಡೆಯುತ್ತಿತ್ತು. ಈಗ ಕಂಬಳಕ್ಕೆ ಆಧುನಿಕ ಸ್ಪರ್ಶ ಸಿಕ್ಕಿದೆ. ಯುವಕರು ಉದ್ಯಮಿಗಳು ಸಂಘ ಸಂಸ್ಥೆಗಳು ಜೊತೆಗೂಡಿವೆ. ಸಂಪ್ರದಾಯಕ್ಕೆ ಯಾವುದೇ ರೀತಿಯ ಧಕ್ಕೆ ಆಗೋದಿಲ್ಲ. ಕಂಬಳದಿಂದ ಕೆಳವರ್ಗದವರ ಶೋಷಣೆ ಆಗೋದಿಲ್ಲ. ಇದು ಕೆಲವರು ತಪ್ಪು ಅಪಪ್ರಚಾರ ಮಾಡುತ್ತಿದ್ದಾರೆ. ಇದು ಎಲ್ಲಾ ವರ್ಗದವರ ರೈತರ ಕ್ರೀಡೆ. ಎಲ್ಲಾ ವರ್ಗದ ಜನರು ಕಂಬಳವನ್ನು ಪ್ರೀತಿ ಮಾಡುತ್ತಾರೆ. ಎಲ್ಲಾ ವರ್ಗದವರು ಕಂಬಳದಲ್ಲಿ ತೊಡಗಿಸಿಕೊಳ್ಳುತ್ತಾರೆ. ಕಂಬಳದಲ್ಲಿ ಶೋಷಣೆಗೆ ಅವಕಾಶ ಇಲ್ಲ. ಇದು ಸರ್ಕಾರದ ಕ್ರೀಡೆ.

ಕಂಬಳಕ್ಕೆ ಬಂದರೆ ಮಾತ್ರ ಈ ಕೋಣಗಳ ಸಂತತಿ ನೋಡಬಹುದು. ಮಗುವಿಗಿಂತ ಹೆಚ್ಚು ಪ್ರೀತಿಯಿಂದ ಕಂಬಳದ ಕೋಣ ಸಾಕುತ್ತಾರೆ. ಸ್ವಂತ ಮಗುವಿಗಿಂತಲೂ ಹೆಚ್ಚಿನ ಪಾಲನೆ ಪೋಷಣೆ ಮಾಡುತ್ತಾರೆ. 90 ದಿನ ಮಾತ್ರ ಕೋಣಗಳನ್ನು ಓಡಿಸಲಾಗುತ್ತೆ ಉಳಿದ ಎಲ್ಲಾ ದಿನ ಕೋಣವನ್ನು ಸಾಗುತ್ತೇವೆ. ಪ್ರೀತಿಯಿಂದ ಸಾಕಿದ ಕೋಣಗಳು. ಕಂಬಳ ಅಂತರಾಷ್ಟ್ರೀಯ ಸಾಧನೆ ಮಾಡಿದ ಕ್ರೀಡೆ. ಹುಸೇನ್ ಬೋಲ್ಟಿಗಿಂತಲೂ ವೇಗದ ಓಟ ಇಲ್ಲಿ ಕಾಣಬಹುದು.

ಕೋಣಗಳು ಮತ್ತು ಕೋನ ಓಡಿಸುವವರು ಇತಿಹಾಸ ಸೃಷ್ಟಿ ಮಾಡಿದ್ದಾರೆ. ಪರಿಸರಕ್ಕೆ ಇದರಿಂದ ಯಾವುದೇ ನಷ್ಟವಿಲ್ಲ. ನೀರಿನಾ ವ್ಯವಸ್ಥೆ ಬೇಡ ಹೆಚ್ಚಿನ ವೆಚ್ಚ ಇಲ್ಲ. ಅದ್ದೂರಿ ತಯಾರಿ ಬೇಡ ಎರಡು ಕರೆಗಳನ್ನು ಮಾಡಿದರೆ ಆಯ್ತು. ಸರಕಾರಕ್ಕೆ ಜನರಿಗೆ ಅಡ್ಡಿಯಾದರೆ ದಾನಿಗಳ ಮೂಲಕ ಕಂಬಳ ಮಾಡಬಹುದು. ಪ್ರಾಣಿಗಳ ಮೂಲಕ ಕಂಬಳ ಮಾಡಿಸಲು ನಾವು ಸಿದ್ಧ. ಇದರಲ್ಲಿ ಯಾವುದೇ ಲಾಬಿ ಇಲ್ಲ ಕಂಬಳದ ಮಾಲೀಕರಿಗೆ ಯಾವುದೇ ಲಾಭ ಇಲ್ಲ. ಮುಖ್ಯಮಂತ್ರಿಗಳಿಗೆ ನಾವು ಅಭಿನಂದನೆ ಹೇಳುತ್ತೇವೆ. ವಿರೋಧಿಸುವವರು ಕಂಬದ ಬಗ್ಗೆ ಆಳವಾಗಿ ತಿಳಿದುಕೊಳ್ಳಿ. ಸಂಸದ ಯದುವೀರ್ ಅವರು ನಿನ್ನೆ ಸಭೆಯಲ್ಲಿ ಇದ್ದರು. ಇದು ಕರಾವಳಿಯ ಕ್ರೀಡೆ ಅಲ್ಲಿ ಆಚರಿಸಲಿ ಎನ್ನುತ್ತಾರೆ.

ಇದು ಕೇವಲ ಕರಾವಳಿಗೆ ಸೀಮಿತವಲ್ಲ. ಬೆಂಗಳೂರು ಅರಮನೆ ಮೈದಾನದಲ್ಲಿ ಕಂಬಳ ಮಾಡಿದ್ದೇವೆ. ಅರಮನೆಯವರೇ ಅವಕಾಶ ನೀಡಿದ್ದಾರೆ. ಅವತ್ತು ಕೂಡ ವಿರೋಧ ಇತ್ತು ಪ್ರಶ್ನಾ ಚಿಂತನೆಯಲ್ಲಿ ಕಂಬಳ ಮಾಡಬಹುದು ಎಂದಿದೆ. ಸಂಬಳ ವಿರೋಧ ಮಾಡಬೇಡಿ ಬಂದು ಸ್ವಾಗತ ಮಾಡಿ. ನಾವು ಮಂಗಳೂರು ದಸರದಲ್ಲಿ ಕುಸ್ತಿ ಮಾಡುತ್ತೇವೆ. ಮೈಸೂರು ದಸರಾದಲ್ಲಿ ಕಂಬಳ ನೋಡಿ. ರಾಜ್ಯದ ಬೇರೆ ಬೇರೆ ಭಾಗದ ಕಲೆಗಳನ್ನು ನಾವು ನೋಡುತ್ತೇವೆ. ನಮ್ಮ ಕ್ರೀಡೆಯನ್ನು ನೀವು ನೋಡಿ. ರಾಜ್ಯದ ವೀರ ಸಾಹಸ ಕ್ರೀಡೆ ಎಂದರು.

View this post on Instagram

A post shared by News Karnataka (@newskarnataka)