ಉಡುಪಿ: ವಿಕೇಂಡ್ ಹೆಸರಿನಲ್ಲಿ ಮಣಿಪಾದಲ್ಲಿ ದಾಂಧಲೆ ನಡೆದಿದೆ. ಸೈಲೆಂಟ್ ಆಗಿದ್ದ ಮಣಿಪಾಲದಲ್ಲಿ ಪುಂಡರು ಬಾಲಬಿಚ್ಚಿದ್ದಾರೆ. ಮಣಿಪಾಲ ದ ಹೆಸರಾಂತ ಪಬ್ ಡೌನ್ ಟೌನ್ ನಲ್ಲಿ ಮಾರಾಮಾರಿ ನಡೆದಿದೆ.
ಮಾರಾಮಾರಿಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಬ್ ಬಳಿಕ್ ನಡುರಸ್ತೆಯಲ್ಲಿ ಗ್ಯಾಂಗ್ ಹೊಡಾದಾಡಿಕೊಂಡಿದೆ. ಹೊಡೆದಾಟದ ವೇಳೆ ಓರ್ವ ಯುವಕನಿಗೆ ರಕ್ತ ಬರುವಂತೆ ತಂಡ ಥಳಿಸಿದೆ.
ಈ ಮೊದಲ ಎಸ್ಪಿ ಅರುಣ್ ಕುಮಾರ್ ಮಣಿಪಾಲದ ಪಬ್ ಕಲ್ಚರ್ ಗೆ ಬ್ರೇಕ್ ಹಾಕಿದ್ದರು. ಮಣಿಪಾಲದ ಹಿಂದಿನ ಸರ್ಕಲ್ ಇನ್ಸ್ಪೆಕ್ಟರ್ ದೇವರಾಜ್ ವೀಕೆಂಡ್ ಡ್ರೈವ್ ಮಾಡಿ ಎಚ್ಚರಿಕೆ ನೀಡಿದ್ದರು. ಮಣಿಪಾಲದ ಆಯಕಟ್ಟಿನ ಜಾಗಗಳಲ್ಲಿ ಪೊಲೀಸ್ ಅಳವಡಿಸಿ ತಪಾಸಣೆ ನಡೆಸುತ್ತಿದ್ದರು. ಸಮಯ ಮೀರಿ ನಡೆಸಲಾಗುತ್ತಿದ್ದ ಮತ್ತು ಅನುಮತಿ ಇಲ್ಲದ ಪಬ್ ಗಳಿಗೆ ಬೀಗ ಜಡಗಿದ್ದರು.
ಆದರೆ ಇತ್ತೀಚಿನ ದಿನಗಳಲ್ಲಿ ಮಣಿಪಾಲದಲ್ಲಿ ಮತ್ತೆ ಪಬ್ ಕಲ್ಚರ್ ಹೆಚ್ಚಾಗಿದೆ ಎನ್ನುವ ದೂರುಗಳು ಕೇಳಿ ಬಂದಿತು.ಈ ದೂರಿಗೆ ಸಾಕ್ಷಿ ಎನ್ನುವಂತೆ ಪಬ್ ನಲ್ಲಿ ನಡೆದ ಗಲಾಟೆ ವಿಡಿಯೋ ವೈರಲ್ ಆಗಿದೆ. ರಸ್ತೆಯಲ್ಲಿ ಹಿಗ್ಗಾ ಮುಗ್ಗಾ ವಿದ್ಯಾರ್ಥಿಗಳು ಹೊಡೆದಾಡಿಕೊಂಡಿದ್ದಾರೆ. ನಿನ್ನೆ ತಡರಾತ್ರಿ ಘಟನೆ ನಡೆದಿದೆ. ರಕ್ತ ಬರುವಂತೆ ಪರಸ್ಪರ ವಿದ್ಯಾರ್ಥಿಗಳು ಹೊಡೆದಾಡಿಕೊಂಡಿದ್ದಾರೆ. ಮಣಿಪಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

