ಉಡುಪಿ: ಧವಳತ್ರಯ ಜೈನ ಕಾಶಿ ಟ್ರಸ್ಟ್ ಹಾಗೂ ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರದ ಜಂಟಿ ಆಶ್ರಯದಲ್ಲಿ ಜು.18ರಂದು ಮಧ್ಯಾಹ್ನ 2.30ರಿಂದ ಸಂಜೆ 4.30ರವರೆಗೆ ಮೂಡುಬಿದಿರೆ ಸ್ವಸ್ತಿ ಶ್ರೀ ಭಟ್ಟಾಾರಕ ಶ್ರೀ ಜೈನಮಠದ ಶ್ರೀ ರಮಾ ರಾಣಿ ಶೋಧ ಕಟ್ಟಡದಲ್ಲಿ ‘ಒಪ್ಪಿಕೊ ಪಚ್ಚೆ ವನಸಿರಿ ಜಾಗೃತಿ ಅಭಿಯಾನ ಆಯೋಜಿಸಲಾಗಿದೆ ಎಂದು ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ ಎಸ್. ಎ. ಕೃಷ್ಣಯ್ಯ ತಿಳಿಸಿದರು.
ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅಭಿಯಾನದ ಜೊತೆಗೆ ಶ್ರೀತಾಳೆ ವೃಕ್ಷ ಹಾಗೂ ವಿವಿಧ ಗಿಡಗಳ ಬೀಜ ಬಿತ್ತಿ ಬೆಳೆಸುವುದು, ಹಸಿರು ಜೈವಿಕ ಕಣಜ ನಿರ್ಮಿಸುವ ಸಂಕಲ್ಪ ಮಾಡಲಾಗುವುದು ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವಾ ಅಭಿಯಾನವನ್ನು ಉದ್ಘಾಟಿಸಲಿದ್ದಾರೆ. ಸಮಾರೋಪದಲ್ಲಿ ಮೂಡುಬಿದಿರೆ ಜೈನಮಠದ ಡಾ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯವರ್ಯ ಸ್ಮಾಮೀಜಿಗಳು ಆಶೀರ್ವಚನ ನೀಡಲಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಗಣೇಶ್ರಾಜ್ ಸರಳೇಬೆಟ್ಟು ಇದ್ದರು.

