ಉಡುಪಿ: ಕರ್ನಾಟಕ ಸ್ಟೇಟ್ ಸಾಫ್ಟ್ ಬಾಲ್ ಕ್ರಿಕೆಟ್ ಅಸೋಸಿಯೇಶನ್ (ಕೆಎಸ್‌ಎಸ್‌ಸಿಎ) ವತಿಯಿಂದ ನ.1ರಿಂದ ಡಿ. 1ರವರೆಗೆ ಬೆಂಗಳೂರಿನ ಆಚಾರ್ಯ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಕರ್ನಾಟಕ ಸಾಫ್ಟ್ ಬಾಲ್ ಪ್ರೀಮಿಯರ್ ಲೀಗ್(ಕೆಎಸ್‌ಪಿಎಲ್) ಕ್ರಿಕೆಟ್ ಟೂರ್ನ್ ಮೆಂಟ್ ನಲ್ಲಿ ‘ಉಡುಪಿ ವಾರಿಯರ್’ ಕ್ರಿಕೆಟ್ ತಂಡ ಭಾಗವಹಿಸಲಿದೆ ಎಂದು ಕ್ರಿಕೆಟ್ ತಂಡದ ಮಾಲೀಕ ಸಂತೋಷ್ ಕುಮಾರ್ ತಿಳಿಸಿದರು.

ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ವಾರಿಯರ್ ತಂಡದಲ್ಲಿ 20 ಜನ ಆಟಗಾರರಿದ್ದು, ರಕ್ಷಿತ್ ಪೂಜಾರಿ ತಂಡದ ನಾಯಕ ಹಾಗೂ ಸಚಿನ್ ಕೋಟೇಶ್ವರ ಉಪ ನಾಯಕರಾಗಿದ್ದಾರೆ.

31 ಜಿಲ್ಲೆಯಿಂದ 32 ತಂಡಗಳು ಈ ಪಂದ್ಯಾಟದಲ್ಲಿ ಭಾಗವಹಿಸಲಿವೆ. ಒಂಬತ್ತು ಓವರ್‌ಗಳ ಪಂದ್ಯ ಇದಾಗಿದ್ದು, ಜಿಲ್ಲೆಯಲ್ಲಿ ಉತ್ತಮ ಕ್ರಿಕೆಟ್ ಆಟಗಾರರನ್ನು ತಂಡಕ್ಕೆೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು. ಕೆಎಸ್‌ಎಸ್‌ಸಿಎ ಪ್ರಚಾರ ವಿಭಾಗದ ಅರ್ಪಿತ್, ರಕ್ಷಿತಾ, ಪ್ರಮುಖರಾದ ಶಿವರಾಮ್ ಕೃಷ್ಣ , ಉಡುಪಿ ತಂಡದ ಉಪ ನಾಯಕ ಸಚಿನ್ ಕೋಟೇಶ್ವರ ಇದ್ದರು.