ಉಡುಪಿ: ಉಡುಪಿ ಜಿಲ್ಲಾ ಆಸ್ಪತ್ರೆ ಹಳೆ ಕಟ್ಟಡದ ಸಾಮಗ್ರಿಯಿಂದಲೇ ಹೊಸ ಕಟ್ಟಡ ಅನುಷ್ಠಾನ ವಿಚಾರವಾಗಿ ಆರೋಗ್ಯ ಸಚಿವ ಯುಟಿ ಖಾದರ್ ಹೇಳಿಕೆ ನೀಡಿದ್ದಾರೆ. ಉಡುಪಿ ಜಿಲ್ಲಾ ಆಸ್ಪತ್ರೆಗೆ ಅಗತ್ಯವಾದ ಪೀಠೋಪಕರಣಗಳಿಗೆ ಟೆಂಡರ್ ಕರೆದಿದ್ದೇವೆ. ಹೆಚ್ಚುವರಿ ಮಾನವ ಸಂಪನ್ಮೂಲದ ಅಗತ್ಯ ಇದೆ. ಹಳೆ ಆಸ್ಪತ್ರೆ ಶಿಫ್ಟ್ ಆಗಲೇಬೇಕು. ಸರ್ಕಾರಿ ವ್ಯವಸ್ಥೆ ಪಾಳು ಬೀಳಬಾರದು ಎಂದರು.

ಎಲ್ಲದಕ್ಕೂ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಆಸ್ಪತ್ರೆ ಅನುಷ್ಠಾನಕ್ಕೆ ಬರುವಾಗ ಆಕ್ಷೇಪ ಮಾಡುವುದು ಸರಿಯಲ್ಲ. ನಮಗೆ ಜನಸಾಮಾನ್ಯರ ಸಮಸ್ಯೆ ಆಡಳಿತ ವ್ಯವಸ್ಥೆ ಎರಡರದ್ದೂ ಅರಿವಿದೆ. ಹಳೆಯ ಕಟ್ಟಡದ ಎಲ್ಲಾ ಸೌಲಭ್ಯಗಳು ಮುಂದುವರೆಯುತ್ತದೆ ಹೊಸ ಸೌಲಭ್ಯಗಳನ್ನು ನೀಡಲಾಗುವುದು ಎಂದರು.

ಹೊಸ ಜಿಲ್ಲಾ ಆಸ್ಪತ್ರೆ ಕಟ್ಟಡ ಕಾರ್ಯನಿರ್ವಹಿಸದಿದ್ದರೆ ಹೋರಾಟ ಉಡುಪಿ ಶಾಸಕ ಹೇಳಿಕೆ ವಿಚಾರವಾಗಿ ಪ್ರತಿಭಟನೆ ಮಾಡುವುದು ಸುಲಭ, ಸಮಸ್ಯೆ ಬಗೆಹರಿಸುವುದು ಕಷ್ಟ. ಜನರು ಯಾಕೆ ಎಂಎಲ್ಎ ಆಯ್ಕೆ ಮಾಡುತ್ತಾರೆ ಪ್ರತಿಭಟನೆ ಮಾಡುವುದಕ್ಕಾ?. ಸಮಸ್ಯೆಯನ್ನು ಬಗೆಹರಿಸುವ ಎಂಎಲ್ಎ ಬೇಕು. ಸಮಸ್ಯೆ ಹುಡುಕಿಕೊಂಡು ಹೋಗುವುದು ಶೋಭೆಯಲ್ಲ. ಸಮಸ್ಯೆ ಬಂದಾಗ ಅಧಿಕಾರಿಗಳನ್ನು ಕೂರಿಸಿಕೊಂಡು ಬಗೆಹರಿಸುವುದು ಜನಪ್ರತಿನಿಧಿಯ ಜವಾಬ್ದಾರಿ ಎಂದರು.

ಮುಖ್ಯಮಂತ್ರಿಗಳ ಬಳಿ ಮಾನವ ಸಂಪನ್ಮೂಲ ನೇಮಕಾತಿಗೆ ಕೇಳಿದ್ದೇವೆ. ರಾಜ್ಯ ಸರ್ಕಾರದಿಂದ ಜನಸಾಮಾನ್ಯರಿಗೆ ಬೇಕಾದ ಎಲ್ಲಾ ಸವಲತ್ತು ಕೊಡುತ್ತಿದ್ದೇವೆ. ಅನುದಾನ ಕೂಡ ಬೇಕಾದಷ್ಟು ಕೊಟ್ಟಿದ್ದಾರೆ. ಸರಕಾರ ಅನುದಾನ ಕೊಟ್ಟೆ ಎಲ್ಲ ಕೆಲಸಗಳು ಆಗುತ್ತೆ, ರಾಜ್ಯದ ಅಭಿವೃದ್ಧಿಗೆ ನಮ್ಮಲ್ಲಿ ಯಾವುದೇ ಕೊರತೆ ಇಲ್ಲ. ಕಬ್ಬು ಬೆಳೆಗಾರರಿಗೆ ಕೇಂದ್ರ ಸರಕಾರ ಕೊಡಬೇಕಾದ ಹಣವನ್ನು ನಾವು ಕೊಡಲು ಸಾಧ್ಯವಿಲ್ಲ.
ಆ ಭಾರವನ್ನು ನಮಗೆ ಹೊರಲು ಸಾಧ್ಯವಿಲ್ಲ ಎಂಬ ಅರ್ಥದಲ್ಲಿ ಮುಖ್ಯಮಂತ್ರಿಗಳು ಮಾತನಾಡಿದ್ದಾರೆ ಎಂದರು.

ಕೇಂದ್ರದ ಭಾರವನ್ನು ರಾಜ್ಯ ಸರ್ಕಾರ ಹೊರಲು ಸಾಧ್ಯ ಉಂಟಾ ಎಂದು ಕೇಳಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ದರ ಪಟ್ಟಿ ವಿಚಾರವಾಗಿ ಸರ್ಕಾರದವರೇ ಬಂದು ಬೆದರಿಸಿ ನೀವು ಜಾರಿ ಮಾಡಬೇಕಾ, ಖಾಸಗಿ ಆಸ್ಪತ್ರೆಗಳಿಗೆ ಸಾಮಾಜಿಕ ಜವಾಬ್ದಾರಿ ಇಲ್ಲವಾ, ಖಾಸಗಿ ಆಸ್ಪತ್ರೆಗಳ ಅಸೋಸಿಯೇಷನ್ ಅವರು ದರಪಟ್ಟಿ ಹಾಕುವಂತೆ ಸೂಚಿಸಬೇಕಲ್ವಾ?, ಸ್ಪಷ್ಟವಾಗಿ ರೋಗಿಗಳಿಗೆ ಕಾಣುವ ರೀತಿಯಲ್ಲಿ ದರಪಟ್ಟಿ ಹಾಕಬೇಕು. ಪ್ರಮುಖ ಚಾರ್ಜ್ಗಳನ್ನು ಹಾಕಲೇಬೇಕು. ಖಾಸಗಿ ಆಸ್ಪತ್ರೆಗಳು ಉತ್ತಮ ಸೇವೆ ಕೊಟ್ಟಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ಫಾರಿನ್ ಇನ್ವೆಸ್ಟ್ಮೆಂಟ್ ಆಗಲು ಬಿಡಬಾರದು. ವಿದೇಶಿ ಹೂಡಿಕೆ ಆರೋಗ್ಯ ಕ್ಷೇತ್ರದಲ್ಲಿ ಆದರೆ ರೋಗಿಗಳಿಗೆ ಕಷ್ಟ ಎಂದರು.