ಉಡುಪಿ: ಉಡುಪಿ ಜಿಲ್ಲಾ ಕಾಂಗ್ರೆಸ್ ಭವನ ಸದಾ ರಾಜಕೀಯ ಚಟುವಟಿಕೆಗಳಿಂದ ಕೂಡಿರುತ್ತದೆ. ಆದರೆ ಇಂದು ಅಲ್ಲಿನ ದೃಶ್ಯ ಭಿನ್ನವಾಗಿತ್ತು.ಮಹಿಳಾ ಕಾಂಗ್ರೆಸ್ ವತಿಯಿಂದ ‘ಆಟಿದ ಕೂಟ’ಕಾರ್ಯಕ್ರಮ ಏರ್ಪಡಿಸಲಾಗಿತ್ತು.

Screenshot 2024 08 13 165926

ಕರಾವಳಿಯ ಆಟಿ ತಿಂಗಳ ಆಟ, ಹಾಡು, ನೃತ್ಯದ ವೈವಿಧ್ಯತೆ ಮತ್ತು ಅಡುಗೆ ರುಚಿಯನ್ನು ಈ ತಲೆಮಾರಿಗೆ ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ಕುಣಿದು ಕುಪ್ಪಳಿಸಿದರು. ಹಾಡು ಹೇಳಿ ಖುಷಿಪಟ್ಟರು. ಹಾಸ್ಯ ಚಟಾಕಿ ಹಾರಿಸಿದರು. ಕೊನೆಯಲ್ಲಿ ಬಗೆಬಗೆಯ ಆಟಿ ತಿಂಗಳ ಭಕ್ಷ್ಯ ಭೋಜನಗಳನ್ನು ಸವಿದರು. ಒಟ್ಟಾರೆ ಸದಾ ರಾಜಕೀಯ ಜಂಜಾಟಗಳಿಂದ ಕೂಡಿರುತ್ತಿದ್ದ ಜಿಲ್ಲಾ ಕಾಂಗ್ರೆಸ್ ಭವನ ಇಂದು ರಿಲ್ಯಾಕ್ಸ್ ಮೂಡ್ ಗೆ ಜಾರಿತ್ತು.