ಉಡುಪಿ: ನಗರದ ತುಂಬಾ ಟ್ರಾಫಿಕ್ ಜಾಮ್ ಆಗಿದ್ದು, ಸಾಲು ಸಾಲು ರಜೆಗಳ ಹಿನ್ನೆಲೆ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ. ವೀಕೆಂಡ್ ಕಾರಣಕ್ಕೆ ಪ್ರವಾಸಿಗರು ಹರಿದು ಬಂದಿದ್ದಾರೆ. ಕೃಷ್ಣ ಮಠದ ಆಸು ಪಾಸು ಪಾರ್ಕಿಂಗ್ ಗೆ ಸ್ಥಳವೇ ಇಲ್ಲದಾಗಿದೆ.

ಶನಿವಾರವಾದ ಕಾರಣ ಸ್ಥಳೀಯ ಭಕ್ತರ ಸಂಖ್ಯೆಯನ್ನು ಹೆಚ್ಚಳವಾಗಿದೆ. ನಗರದ ಬಸ್ ನಿಲ್ದಾಣ, ಕಲ್ಸಂಕ ಪರಿಸರದಲ್ಲಿ ಸಾಲು ಸಾಲು ವಾಹನಗಳು ನಿಂತಿದೆ. ಕೃಷ್ಣ ಮಠದಲ್ಲೂ ಭಕ್ತರ ದಂಡು ಹೆಚ್ಚಾಗಿದೆ. ದರ್ಶನಕ್ಕೆ ಭಕ್ತರು ಸಾಲು ನಿಂತಿದ್ದಾರೆ. ಕೃಷ್ಣಮಠದ ಪಾರ್ಕಿಂಗ್ ಸ್ಥಳದಲ್ಲೂ ಫುಲ್ ರಶ್ ಆಗಿದೆ. ಸ್ಥಳೀಯ ವಾಹನಗಳು ಸಂಚಾರಕ್ಕೆ ಪರದಾಟ ನಡೆಸುವಂತಾಯಿತು.