ಉಡುಪಿ: ಉಡುಪಿಯ ಶ್ರೀ ಕೃಷ್ಣ ಮಠವನ್ನು ಸಂಪರ್ಕ ಮಾಡುವ ಕಲ್ಸಂಕ ಜಂಕ್ಷನ್ ನಲ್ಲಿ ಟ್ರಾಫಿಕ್ ಕಿರಿಕಿರಿ ಮಿತಿಮೀರಿದೆ. ಉಡುಪಿಯಲ್ಲಿ ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು ರೋಡ್ ಬ್ಲಾಕ್ ಸಾಮಾನ್ಯವಾಗಿದೆ.
ಉಡುಪಿ ನಗರಕ್ಕೆ ಸಮರ್ಪಕವಾದ ಟ್ರಾಫಿಕ್ ಸಿಗ್ನಲ್ ಇನ್ನು ಕೂಡ ವ್ಯವಸ್ಥೆ ಆಗಿಲ್ಲ. ಜನರ ಬಹುಕಾಲದ ಬೇಡಿಕೆಯನ್ನು ಗಮನಿಸಿ, ಜಿಲ್ಲಾ ಪೊಲೀಸ್ ಇಲಾಖೆಯ ಸಲಹೆ ಪಡೆದು ಇದೀಗ ಕಲ್ಸಂಕ ಜಂಕ್ಷನ್ ನಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸಲಾಗಿದೆ.
ಇದರಿಂದ ಕೃಷ್ಣ ಮಠಕ್ಕೆ ಹೋಗುವ ಪ್ರವಾಸಿಗರಿಗೆ ಮಾತ್ರವಲ್ಲ ಸ್ಥಳೀಯ ಸವಾರರಿಗೂ ಅನುಕೂಲವಾಗಬಹುದು ಎಂಬ ನಿರೀಕ್ಷೆ ಇದೆ. ಪ್ರಧಾನಿ ನರೇಂದ್ರ ಮೋದಿಯವರು ಕೃಷ್ಣಮಠಕ್ಕೆ ಭೇಟಿ ನೀಡಿದ ಮರುದಿನವೇ ಟ್ರಾಫಿಕ್ ಸಿಗ್ನಲ್ ಆರಂಭಿಸಲಾಗಿದೆ.
ಅನೇಕ ಆರಂಭಿಕ ನ್ಯೂನತೆಗಳಿದ್ದು ಇದನ್ನೆಲ್ಲ ಸರಿಪಡಿಸಿಕೊಂಡು ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ ಸುಧಾರಿಸುವುದಾಗಿ ಎಸ್ ಪಿ ಹರಿರಾಮ ಶಂಕರ್ ಭರವಸೆ ನೀಡಿದ್ದಾರೆ.

