ಉಡುಪಿ: ಸಿದ್ದರಾಮಯ್ಯ ಮುಂದಿನ ಎರಡುವರೆ ವರ್ಷ ಮುಂದುವರಿಯುತ್ತೇನೆ ಅನ್ನೋ ಮಾತು ಹೇಳಿದ್ದಾರೆ. ನನಗೆ ಡಿಕೆ ಶಿವಕುಮಾರ್ ಆಪ್ತ, ಹಾಗಾಗಿ ಅವರ ಬಗ್ಗೆ ಅನುಕಂಪ ಬರ್ತಾಯಿದೆ. ಅಧಿಕಾರವನ್ನು ಕಾಲಿನಿಂದ ಒದ್ದು ತೆಗೆದುಕೊಳ್ಳುತ್ತೇನೆ ಎಂದಿರುವ ಮಾತು ನೆನಪಿದೆ. ಸಹಜವಾಗಿ ಅಧಿಕಾರ ಪಡೆಯುತ್ತಾರೋ?, ಅಥವಾ ಅವರ ಸಹಜ ಗುಣ, ಕಾಲಿನಿಂದ ಒದ್ದು ಪಡೆಯುತ್ತಾರೋ ನಿರೀಕ್ಷೆ ಮಾಡುತ್ತಿದ್ದೇವೆ ಎಂದು ಮಾಜಿ ಸಚಿವ, ಶಾಸಕ ವಿ‌.ಸುನಿಲ್ ಕುಮಾರ್ ಹೇಳಿಕೆ ನೀಡಿದರು.

ಈ ಕ್ರಾಂತಿ, ಈ ಕಂಪನ ಕಾಂಗ್ರೆಸ್ ನ ಒಳಗೆ ಆಗಲಿ, ಆದರೆ ರಾಜ್ಯದ ಜನತೆಗೆ ತೊಂದರೆ ಆಗದಿರಲಿ. ಬಿಜೆಪಿ ಚುನಾವಣೆಗೆ ಹೋಗಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಕಂಪನದಲ್ಲಿ ಬಿಜೆಪಿಯ ಪಾತ್ರ ಇಲ್ಲ. ಈ ಸರ್ಕಾರ ಶೀಘ್ರವಾಗಿ ಪತನವಾಗಬೇಕು. ಸರ್ಕಾರ ಪತನವಾಗಿ ಮುಂದಿನ ಚುನಾವಣೆಗೆ ಹೋಗಬೇಕು. ನಾವೇ ಪುಷ್ಪಾರ್ಚನೆ ಮಾಡಬೇಕು ಅನ್ನುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎಂದರು.

ರಾಜ್ಯದಲ್ಲಿ ರಸ್ತೆ ಗುಂಡಿಗಳ ವಿಚಾರವಾಗಿ ಮಾತನಾಡಿ, ಇದು 80% ಸರ್ಕಾರ ಆದ್ದರಿಂದ ಗುಂಡಿಗಳು ಬಿದ್ದಿವೆ. ಸಾವಿರಾರು ಗುಂಡಿಗಳು ಬಿದ್ದಿವೆ. ಸಾವಿಲ್ಲದ ಮನೆಯಿಂದ ಸಾಸಿವೆ ತಾ ಅನ್ನುವ ಮಾತಿದೆ. ಇವತ್ತು ರಾಜ್ಯದಲ್ಲಿ ಗುಂಡಿ ಇಲ್ಲದ ರಸ್ತೆಗಳಿಲ್ಲ ಎಂಬ ಪರಿಸ್ಥಿತಿ ಉಂಟಾಗಿದೆ. 80% ಪರ್ಸೆಂಟ್ ಸರ್ಕಾರವೇ ಇದಕ್ಕೆ ಕಾರಣ. ನಾವು ಶಾಸಕರು ಹೊಸ ರಸ್ತೆಯನ್ನು ನಿರ್ಮಾಣ ಕೇಳುತ್ತಾನೆ ಇಲ್ಲ ಎಂದರು.

ಹೊಸ ರಸ್ತೆ ನಿರ್ಮಾಣ ಕನಸಿನ ಮಾತು. ಇರುವ ರಸ್ತೆಗಳ ಗುಂಡಿ ಮುಚ್ಚಿಸಲು ಆಗುತ್ತಿಲ್ಲ. ಮುಂದೆ ಬಿಜೆಪಿ ಸರ್ಕಾರ ಬಂದ ಮೇಲೆ ಗುಂಡಿ ಮುಚ್ಚಬೇಕೋ ಏನೋ, ಸಿಎಂ ಕೈಯಿಂದ ಒಡೆಯದ ತೆಂಗಿನಕಾಯಿ.  ಈ ಸರ್ಕಾರಕ್ಕೆ ಭಗವಂತನ ಕೃಪೆಯೂ ಇಲ್ಲ. ಕಾಯಿ ಸಹಜವಾಗಿ ಒಡೆಯಬೇಕು. ಭಗವಂತನ ಕೃಪೆ ಈ ಸರ್ಕಾರಕ್ಕೆ ಇಲ್ಲ ಅನ್ನುವ ಶಕುನವಾಗಿದೆ ಎಂದರು.

ಕೊಲಂಬಿಯಾದಲ್ಲಿ ರಾಹುಲ್ ಗಾಂಧಿ ಮಾತು ವಿಚಾರವಾಗಿ ಮಾತನಾಡಿ, ಗಾಂಧಿ ಕುಟುಂಬ ಯಾವತ್ತು ಈ ದೇಶಕ್ಕೆ ನಿಷ್ಟರಾಗಿ ಇರಲಿಲ್ಲ. ವಿದೇಶಕ್ಕೆ ಹೋದಾಗ ಭಾರತವನ್ನು ಟೀಕೆ ಮಾಡುವುದು. ವ್ಯವಸ್ಥೆಯನ್ನು  ಟೀಕೆ ಮಾಡುವುದು ಮುಂದುವರಿಸಿದ್ದಾರೆ. ಮೊದಲು ದೇಶದ ಬಗ್ಗೆ ನಿಷ್ಠೆಯನ್ನು ತೋರಿಸಿ. ಈ ನಡವಳಿಕೆ ನಾಯಕತ್ವವನ್ನು ರೂಪಿಸುವುದಿಲ್ಲ. ಮೊದಲು ದೇಶಕ್ಕೆ ನಿಷ್ಠರಾಗಬೇಕು. ಈ ಕುಟುಂಬ ಯಾವತ್ತೂ ದೇಶದ ಬಗ್ಗೆ ನಿಷ್ಠೆ ತೋರಿಸಿಲ್ಲ. ಮನೆಯಲ್ಲಿ ದೇಶದ ಬಗ್ಗೆ ನಿಷ್ಠೆ ಇಲ್ಲದ ಸಂಸ್ಕಾರ ಸಿಕ್ಕಿದೆ. ಆದ್ದರಿಂದ ವಿದೇಶದಲ್ಲಿ ಈ ರೀತಿಯ ಮಾತನಾಡಿದ್ದಾರೆ ಎಂದರು.