ಉಡುಪಿ: ಮರವಂತೆ ವರಾಹ ಸ್ವಾಮಿ ದೇವಳದ ಸಮೀಪ ಬೀಚ್ ಎದುರುಗಡೆ ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಿಸಿರುವ ಸುಸಜ್ಜಿತ ಶೌಚಾಲಯ ಮೂಲೆಗುಂಪಾಗಿದೆ.

ಕೋಸ್ಟಲ್ ಸರ್ಕ್ಯೂಟ್ ಯೋಜನೆಯಡಿ ನಿರ್ಮಿತ ವ್ಯವಸ್ಥೆ ಸಾರ್ವಜನಿಕ ಉಪಯೋಗಕಿಲ್ಲದೆ ಪಾಳು ಬಿದ್ದಿದೆ. ಪ್ರತಿದಿನ ಮರುವಂತೆ ಬೀಚ್ ಗೆ ಸಹಸ್ರಾರು ಮಂದಿ ಪ್ರವಾಸಿಗರು ಬರುತ್ತಾರೆ. ಸಮುದ್ರ ಮತ್ತು ನದಿ ನಡುವೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿ ನಿರ್ಮಾಣಗೊಂಡಿರುವ ಟಾಯ್ಲೆಟ್ ಅಸಹನೀಯತೆಗೆ ಸಾಕ್ಷಿಯಾಗಿದೆ. ಶೌಚಾಲಯ ದೊಳಗೆ ಕಾಲಿಡಲಾಗದಷ್ಟು ದುಸ್ಥಿಯಲ್ಲಿದೆ.

ನೀರಿನ ವ್ಯವಸ್ಥೆ ಇಲ್ಲದೆ ಬಾಗಿಲು ಮುರಿದು ಬಿದ್ದಿದೆ. ಸುತ್ತಲೂ ಗಿಡಗಂಟಿಗಳು ಬೆಳೆದು ನಿಂತಿದೆ. ಕಟ್ಟಡದ ಛಾವಣಿ ಹಾರಿ ಹೋಗಿದೆ. ಎದುರಿನ ಕಲ್ಲಿನ ಬೆಂಚು, ಲೈಟಿಂಗ್ ಕಂಬಗಳಿಗೆ ಹಾಳಾಗಿದ್ದು, ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಶೌಚಾಲಯವು ಸಾರ್ವಜನಿಕರ, ಪ್ರವಾಸಿಗರ ಉಪಯೋಗಕ್ಕೆ ಯೋಗ್ಯವಲ್ಲದ ಸ್ಥಿತಿಗೆ ತಲುಪಿದೆ.