ಉಡುಪಿ: ಮನೆಯಲ್ಲೇ ದಿಢೀರ್ ಕುಸಿದುಬಿದ್ದು ದೇವಸ್ಥಾನದ ಅರ್ಚಕರೊಬ್ಬರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಬೀಡಿನಗುಡ್ಡೆಯ ಶಾರದ ಕಲ್ಯಾಣ ಮಂಟಪ ಬಳಿ ನಡೆದಿದೆ.
ಮೃತರನ್ನು ರಾಮ ಭಟ್ (69) ಎಂದು ಗುರುತಿಸಲಾಗಿದೆ. ಇವರು ತೆಂಕಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ 45 ವರ್ಷಗಳ ಕಾಲ ಅರ್ಚಕಾಗಿ ಸೇವೆ ಸಲ್ಲಿಸಿದ್ದರು ಎಂದು ತಿಳಿದುಬಂದಿದೆ.
ಇವರು ಬೀಡಿನಗುಡ್ಡೆಯ ಶಾರದ ಕಲ್ಯಾಣ ಮಂಟಪ ರಸ್ತೆಯಲ್ಲಿರುವ ಮನೆಯಲ್ಲಿ ಕುಸಿದುಬಿದ್ದ ಪರಿಣಾಮ ತಲೆಗೆ ಗಂಭೀರ ಗಾಯವಾಗಿ ಅಧಿಕ ರಕ್ತಸ್ತ್ರಾವದಿಂದ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಶವವನ್ನು ಜಿಲ್ಲಾಸ್ಪತ್ರೆಯ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ನೆರವಾದರು.

