ಉಡುಪಿ: ಪರ್ಕಳ ಸಮೀಪದ ದೇವಸ್ಥಾನಬೆಟ್ಟು ನಿವಾಸಿ, ತಾಸೆ ನುಡಿಸುವ ಕಲಾವಿದ ಅವಿನಾಶ್ ಸೇರಿಗಾರ ( 33 ) ಅನಾರೋಗ್ಯದಿಂದ ನಿಧನರಾದರು.

ಅವಿವಾಹತರಾಗಿದ್ದ ಇವರು ಪರ್ಕಳದ ಸುತ್ತಮುತ್ತ ನಾಗಸ್ವರ ನುಡಿಸುವವರೊಂದಿಗೆ ತಾಸೆ ಮತ್ತು ವಾದ್ಯವನ್ನು ನುಡಿಸುತ್ತಿದ್ದರು. ಉಳಿದ ಸಮಯದಲ್ಲಿ ಮೇಸ್ತ್ರಿ ಕೆಲಸವನ್ನು ಕೂಡ ಮಾಡುತ್ತಿದ್ದರು. ಇವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಸಾವು ಸಂಭವಿಸಿದೆ ಎಂದು ತಿಳಿದು ಬಂದಿದೆ.

ದಿವಂಗತ ದಾಸ ಸೇರಿಗಾರರ ಪುತ್ರರಾದ ಇವರು, ತಾಯಿ, ಓರ್ವ ಅಣ್ಣ, ಇಬ್ಬರು ಅಕ್ಕಂದಿರನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಸಮಾಜಸೇವಕ ಗಣೇಶ್ ರಾಜ್ ಸರಳೆಬೆಟ್ಟು ಸಹಿತ ಊರ ಗಣ್ಯರು ಸಂತಾಪ ಸೂಚಿಸಿದ್ದಾರೆ.

View this post on Instagram

A post shared by News Karnataka (@newskarnataka)