ಉಡುಪಿ: ಉಡುಪಿ ಮೊಬೈಲ್ ರಿಟೇಲರ್ಸ್ ಅಸೋಸಿಯೇಷನ್ (ಯುಎಂಆರ್ ಎ)ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಸೆ. 3ರಂದು ಸಂಜೆ 6ಗಂಟೆಗೆ ಅಜ್ಜರಕಾಡಿನ ಟೌನ್ ಹಾಲ್ನಲ್ಲಿ ನಡೆಯಲಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದಉಡುಪಿ ಮೊಬೈಲ್ ರಿಟೇಲರ್ಸ್ ಅಸೋಸಿಯೇಷನ್ ಅಧ್ಯಕ್ಷ ವಿವೇಕ್ ಜಿ. ಸುವರ್ಣ ಅವರು, ಎಐಎಂಆರ್ ಎ ಕರ್ನಾಟಕದ ರಾಜ್ಯಾಧ್ಯಕ್ಷ ರವಿಕುಮಾರ್ ಕೆ ಅವರು ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ ಎಂದರು.
ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಪ್ರವರ್ತಕ ಡಾ. ಜಿ. ಶಂಕರ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶ್ ಪಾಲ್ ಸುವರ್ಣ, ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮೊಬೈಲ್ ಉದ್ಯಮ ಪ್ರತಿನಿಧಿಗಳಾಗಿ ಸದಾನಂದ್ (ಶಿಯೋಮಿ),
ವಿನ್ನಿಲ್ ಕುಮಾರ್ (ವಿವೋ), ಚೇತನ್ ಎಂ (ಒಪ್ಪೋ), ಮತ್ತು ಸೋಮಶೇಖರ್ (ನಥಿಂಗ್), ಅಲ್ ಇಂಡಿಯಾ ಮೊಬೈಲ್ ರಿಟೇಲರ್ ಅಸೋಸಿಯೇಷನ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನವ್ನೀತ್ ಪಾಠಕ್, ರಾಜ್ಯ ಅಧ್ಯಕ್ಷ ರವಿಕುಮಾರ್ ಕೆ., ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಸುಹಾಸ್ ಕಿಣಿ, ರಾಜ್ಯ ಉಪಾಧ್ಯಕ್ಷ ಮೋಹನ್ ಹುಗಾರ್ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗೌರವಾಧ್ಯಕ್ಷ ಸಂದೇಶ್ ಬಲ್ಲಾಳ್, ಗೌರವ ಸಲಹೆಗಾರ ರಾಜೇಶ್ ಮಾಬಿಯನ್, ಕಾರ್ಯದರ್ಶಿ ಖಾದರ್, ಕುಂದಾಪುರ ವಿಭಾಗದ ಗೌರವಾಧ್ಯಕ್ಷ ಇರ್ಷಾದ್, ಮಲ್ಪೆ ವಿಭಾಗದ ಅಧ್ಯಕ್ಷ ಜೋಯಲ್ ಅಮನ್ನ ಉಪಸ್ಥಿತರಿದ್ದರು.

