ಉಡುಪಿ: ಕಟಪಾಡಿಯಲ್ಲಿ‌ ನಡೆದ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ “ಸು ಫ್ರಮ್ ಸೋ” ಕನ್ನಡ ಚಿತ್ರದ ಮುಖ್ಯ ಪಾತ್ರಧಾರಿಗಳಾದ ಬಾವ, ಗುರೂಜಿ, ಸುಲೋಚನ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದರು.

ಕಟಪಾಡಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಪೂಜಿಸಲ್ಪಟ್ಟ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ಅತ್ಯಂತ ವೈವಭದಿಂದ ನಡೆಯಿತು. ಈ ಮೆರವಣಿಗೆಯಲ್ಲಿ ಜಯಕರ್ ಕುಂದರ್ ನೇತೃತ್ವದ ಸಂಗಮ ಫ್ರೆಂಡ್ಸ್ ತಂಡದ ಸದಸ್ಯರು “ಸು ಫ್ರಮ್ ಸೋ” ಕನ್ನಡ ಚಿತ್ರದ ಬಾವ, ಗುರೂಜಿ, ಸುಲೋಚನ ಪಾತ್ರಧಾರಿಗಳ ವೇಷ ಧರಿಸಿ ಸಾರ್ವಜನಿಕರನ್ನು ರಂಜಿಸಿದರು.

ಪ್ರತಿ ಗಣೇಶೋತ್ಸವ ಸಂದರ್ಭದಲ್ಲಿ ಸಂಗಮ ಫ್ರೆಂಡ್ಸ್ ತಂಡದ ಸದಸ್ಯರು ವಿಶೇಷ ವೇಷ ಹಾಕಿ ಜನರ ಗಮನ ಸೆಳೆಯುತ್ತಿದ್ದರು. ಅದರಂತೆ ಈ ಬಾರಿಯ ಗಣೇಶೋತ್ಸವದ ಮೆರವಣಿಗೆಯಲ್ಲಿ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆದ SU from SO ಕನ್ನಡ ಚಿತ್ರದಲ್ಲಿ ಕಾಣಿಸಿಕೊಂಡ ಬಾವ, ಗುರೂಜಿ, ಸುಲೋಚನ ಮೂವರ ವೇಷ ಹಾಕಿ ಮೆರವಣಿಗೆ ಉದ್ದಕ್ಕೂ ಸಾರ್ವಜನಿಕರನ್ನು ರಂಜಿಸಿದರು.

ಜಯಕರ್ ಕುಂದರ್ ಕಟಪಾಡಿಯಲ್ಲಿ ರಿಕ್ಷಾ ಚಾಲಕರಾಗಿದ್ದು ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳ ಜೊತೆಗೆ ಚಲನಚಿತ್ರ ನಟರಾಗಿ ಪ್ರಸಿದ್ಧಿ ಪಡೆದಿದ್ದಾರೆ.