ಉಡುಪಿ: ಎಸ್ ಎಸ್ ಎಲ್ ಸಿ ಪಿಯುಸಿ ತೇರ್ಗಡೆಗೆ ಕನಿಷ್ಠ ಅಂಕ 33 ಕ್ಕೆ ಇಳಿಕೆ ವಿಚಾರವಾಗಿ ಶಾಲಾ ಶಿಕ್ಷಣ ಮಂತ್ರಿಗಳ ನಿರ್ಧಾರದ ಬಗ್ಗೆ ಚರ್ಚೆಯಾಗಲಿ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಹೇಳಿಕೆ ನೀಡಿದರು.
ಪಾಸಿಂಗ್ ಪರ್ಸೆಂಟೇಜ್ ಇಳಿಕೆ ವಿಚಾರವಾಗಿ ಈ ಬಗ್ಗೆ ಚರ್ಚೆಯಾಗುತ್ತಿದೆ ಮುಖ್ಯಮಂತ್ರಿಗಳು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. 35 ಅಂಕ ಇರುವುದನ್ನು 33 ಕ್ಕೆ ಇಳಿಸಿದ್ದಾರೆ. ಶಾಲಾ ಶಿಕ್ಷಣ ಮಂತ್ರಿಗಳು ಇದನ್ನು ಆದೇಶ ಮಾಡಿರುವುದು. ಈ ಬಗ್ಗೆ ಇನ್ನಷ್ಟು ಚರ್ಚೆಗಳು ಆಗಬೇಕು ಎಂಬ ಅಭಿಪ್ರಾಯವಿದೆ ಎಂದರು.
ಶಾಲಾ ಶಿಕ್ಷಣ ಮಂತ್ರಿಗಳು ಯಾವ ಉದ್ದೇಶ ಇಟ್ಟುಕೊಂಡು ಇದನ್ನು ಮಾಡಿದ್ದಾರೆ ಎಂಬ ಮಾಹಿತಿ ಇಲ್ಲ. ಈ ರೀತಿ ಕಮ್ಮಿ ಮಾಡಿರುವುದು ಸರಿಯಲ್ಲ ಅನಿಸುತ್ತದೆ. ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಲಾಗಿದೆ. ಈ ಬಗ್ಗೆ ಸರಿಯಾದ ಅಧ್ಯಯನ ಮಾಡಬೇಕು ಎಂಬುದು ನನ್ನ ಅಭಿಪ್ರಾಯ. ಈ ಬಗ್ಗೆ ಹೆಚ್ಚು ಚರ್ಚೆ ಆಗಬೇಕು ಎಂದು ಸಿಎಂ ಶಿಕ್ಷಣ ಸಚಿವರಿಗೆ ಸೂಚನೆ ನೀಡಿದ್ದಾರೆ.

