ಉಡುಪಿ : ಬೈಂದೂರು ಶಿರೂರು ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ರಿಸಲ್ಟ್ನಲ್ಲಿ ಚಮತ್ಕಾರಗೊಂಡಿದ್ದು, 35% ನಿಂದ ನೇರವಾಗಿ 94% ಫಲಿತಾಂಶಕ್ಕೆ ಭಾರೀ ಜಿಗಿತಗೊಂಡಿದೆ.
ಪ್ರಾಂಶುಪಾಲೆ ಜಯಂತಿ ಟೀಚರ್ ಪರಿಶ್ರಮಕ್ಕೆ ಸಿಕ್ಕ ಫಲವಾಗಿದೆ. ಗುರುಚರಣಕ್ಕೆ ಶಿರಬಾಗಿ ಶಾಸಕ ಗುರುರಾಜ್ ಗಂಟಿಹೊಳೆ ಗೌರವ ಸಲ್ಲಿಸಿದರು. ವೇದಿಕೆಯಲ್ಲಿ ಭಾವುಕರಾಗಿ ಬೈಂದೂರು ಶಾಸಕ ಗಂಟಿಹೊಳೆ ಕಣ್ಣೀರಿಟ್ಟರು.
ಆ ಟೀಕೆಗಳೇ ಇಂದಿನ ಯಶಸ್ಸಿಗೆ ಕಾರಣ ಎಂದು ಶಾಸಕ ಸಂತಸ ಹಂಚಿಕೊಂಡರು. ವಿದ್ಯಾರ್ಥಿಗಳಿಗೆ ನೀಡಲಾದ ವಿಶೇಷ ತರಗತಿಗಳ ಫಲವಾಗಿ ಬಂದ ಸಾಧನೆಯಾಗಿದೆ. ಶಿಕ್ಷಕರ ತಂಡದ ಸಮರ್ಪಣೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸರ್ಕಾರಿ ಶಾಲೆಗಳಿಗೂ ಸಾಧ್ಯ ದೊಡ್ಡ ಸಾಧನೆ ಎಂಬುದಕ್ಕೆ ಸಾಕ್ಷಿಯಾಗಿದೆ. ಬೈಂದೂರು ಕ್ಷೇತ್ರಕ್ಕೆ ಹೆಮ್ಮೆಯ ಕ್ಷಣ ಎಂದು ಸ್ಥಳೀಯರು ಎಂದಿದ್ದಾರೆ.

