ಉಡುಪಿ: ಎಸ್‌ಎಸ್‌ಎಲ್‌ಸಿ ‍ಪರೀಕ್ಷೆಯಲ್ಲಿ ಕಳೆದ ಬಾರಿ ರಾಜ್ಯದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದ ಉಡುಪಿ ಜಿಲ್ಲೆ ಈ ಬಾರಿ ಮತ್ತೆ ಅಗ್ರಸ್ಥಾನ ಪಡೆಯುವ ನಿರೀಕ್ಷೆಯೊಂದಿಗೆ ಪರೀಕ್ಷೆ ಎದುರಿಸಲು ಸಕಲ ಸಿದ್ಥತೆ ನಡೆಸಿದೆ.

ಇಂದಿನಿಂದ ಎ.2ರವರೆಗೆ ರಾಜ್ಯಾದ್ಯಂತ ಪರೀಕ್ಷೆ ನಡೆಯಲಿದ್ದು, ಉಡುಪಿ ಜಿಲ್ಲೆಯಲ್ಲಿ 7353 ಗಂಡು ಹಾಗೂ 6798 ಹೆಣ್ಣು ಮಕ್ಕಳು ಸೇರಿದಂತೆ ಒಟ್ಟು 14,151 ಮಂದಿ ಈ ಪರೀಕ್ಷೆಯನ್ನು ಬರೆಯಲಿದ್ದಾರೆ.

ಜಿಲ್ಲೆಯಲ್ಲಿ ಈ ಬಾರಿ 51 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟಾರೆಯಾಗಿ 14,151 ಮಂದಿ ಎಸೆಸೆಲ್ಸಿ ಪರೀಕ್ಷೆ ಬರೆಯಲು ಹೆಸರು ನೊಂದಾಯಿಸಿಕೊಂಡಿದ್ದರೂ, ಇವರಲ್ಲಿ ಮೊದಲ ಬಾರಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ 13,516 ಮಂದಿ. (6908 ಬಾಲಕರು, 6608 ಬಾಲಕಿಯರು). ಉಳಿದಂತೆ ಪುನರಾವರ್ತಿತ ಮಕ್ಕಳು 295 (208+87). ಅಲ್ಲದೇ ಖಾಸಗಿಯಾಗಿ 293 (205+88)ಹಾಗೂ ಖಾಸಗಿ ಪುನರಾವರ್ತಿತರು 47 (32+15) ಪರೀಕ್ಷೆ ಬರೆಯಲು ಹೆಸರು ನೊಂದಾಯಿಸಿಕೊಂಡಿದ್ದಾರೆ.

ಈ ಬಾರಿಯ ಪರೀಕ್ಷೆ 51 ಕೇಂದ್ರಗಳ ಒಟ್ಟು 686 ಕೊಠಡಿಗಳನ್ನು ಪರೀಕ್ಷಾ ಕಾರ್ಯಕ್ಕೆ ನಿಗದಿ ಪಡಿಸಲಾಗಿದೆ. ಬೈಂದೂರು ಮತ್ತು ಕುಂದಾಪುರ ವಲಯಗಳಲ್ಲಿ ತಲಾ 8, ಕಾರ್ಕಳದಲ್ಲಿ 9, ಬ್ರಹ್ಮಾವರದಲ್ಲಿ 11 ಹಾಗೂ ಉಡುಪಿ ವಲಯದಲ್ಲಿ 15 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಎಲ್ಲಾ ಕೇಂದ್ರಗಳ ಎಲ್ಲಾ ಪರೀಕ್ಷಾ ಕೊಠಡಿಗಳಿಗೆ ಹಾಗೂ ಪರೀಕ್ಷಾ ಕೇಂದ್ರದ ಕ್ಯಾಂಪಸ್‌ಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ.

ಜಿಲ್ಲಾ ಕೇಂದ್ರದ ಜಿಲ್ಲಾ ಪಂಚಾಯತ್ ಕೊಠಡಿಯಲ್ಲಿ (ಮಣಿಪಾಲ) ಜಿಲ್ಲೆಯ ಪ್ರತಿ 6 ಪರೀಕ್ಷಾ ಕೇಂದ್ರಗಳಿಗೆ ಒಬ್ಬ ರಂತೆ ಒಟ್ಟು 9 ಮಂದಿ ಸಿಬ್ಬಂದಿಗಳನ್ನು ಸಿಸಿಟಿವಿ ಪರಿಶೀಲನೆಗಾಗಿ ನಿಯೋಜಿಸಲಾಗಿದೆ.

View this post on Instagram

A post shared by News Karnataka (@newskarnataka)