ಉಡುಪಿ: ಟ್ರಾಫಿಕ್ ನಿಯಂತ್ರಣವನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಹೊಸ ತಂತ್ರಜ್ಞಾನ ಅಳವಡಿಕೆ ಮಾಡಲಾಯಿತು.

ಇಂದು ಜಿಲ್ಲಾ ಪೊಲೀಸ್ ಕಚೇರಿಯ ಸೆಂಟಿನಲ್ ಹಾಲ್‌ನಲ್ಲಿ ಟ್ರಾಫಿಕ್ ನಿರ್ವಹಿಸುವ ಪೊಲೀಸರಿಗೆ ಸ್ಪೀಡ್ ರಾಡಾರ್ ಗನ್ ಕುರಿತು ವಿಶೇಷ ತರಬೇತಿಯನ್ನು ಹಮ್ಮಿಕೊಳ್ಳಲಾಯಿತು. ಸಂಪನ್ಮೂಲ ವ್ಯಕ್ತಿಗಳು ಪೊಲೀಸರಿಗೆ ಈ ಸಾಧನದ ಕಾರ್ಯವಿಧಾನ ಮತ್ತು ಉಪಯೋಗದ ಕುರಿತು ವಿವರವಾದ ಮಾರ್ಗದರ್ಶನ ನೀಡಿದರು.

ಡಾಪ್ಲರ್ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುವ ಈ ಗನ್‌ನಿಂದ ಸಂಚಾರದಲ್ಲಿರುವ ವಾಹನಗಳ ವೇಗವನ್ನು ನಿಖರವಾಗಿ ಅಳೆಯಲು ಸಾಧ್ಯವಾಗುತ್ತದೆ. ಈ ಉಪಕರಣದ ಬಳಕೆಯಿಂದ ವೇಗ ಮಿತಿಯನ್ನು ಮೀರುವ ವಾಹನಗಳ ವಿರುದ್ಧ ತ್ವರಿತ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸಹಕಾರಿಯಾಗಲಿದೆ. ಉಡುಪಿ ಟ್ರಾಫಿಕ್ ಪೊಲೀಸರು ಈಗ ವೇಗ ನಿಯಂತ್ರಣದ ಹೊಸ ಹಂತಕ್ಕೆ ಕಾಲಿಟ್ಟಿದ್ದಾರೆ.