ಉಡುಪಿ: ತೆಂಕಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ 125 ವರ್ಷದ ಭಜನಾ ಸಪ್ತಾಹ ಅಂಗವಾಗಿ 6ನೇ ದಿನವಾದ ಸೋಮವಾರ ಶ್ರೀ ಲಕ್ಷ್ಮೀ ವೆಂಕಟೇಶ ದೇವರಿಗೆ ಶ್ರೀದೇವಿ ಭೂದೇವಿ ಸಹಿತ ಗರುಡಾರೂಢ ಶ್ರೀ ಲಕ್ಷ್ಮೀ ವೆಂಕಟೇಶ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು.
ದೇವಸ್ಥಾನದ ಪ್ರಧಾನ ಅರ್ಚಕರಾದ ವಿನಾಯಕ ಭಟ್ ಮತ್ತು ದಯಾಘನ್ ಭಟ್ ಅವರು ವಿಶೇಷ ಅಲಂಕಾರವನ್ನು ಮಾಡಿ ಪೂಜೆಯನ್ನು ನೆರವೇರಿಸಿದರು. ದೇವಾಲಯ ಹಾಗೂ ಭಜನಾ ಸಾಳಿಯನ್ನು ವಿಶೇಷ ಹೂವಿನಿಂದ ಅಲಂಕಾರ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ನಡೆದ ಮಹಾ ರಂಗಪೂಜೆಯಲ್ಲಿ ಸಾವಿರಾರು ಭಕ್ತರೂ ಪಾಲ್ಗೊಂಡು ಶ್ರೀದೇವರ ದರ್ಶನ ಪಡೆದರು. ಆಡಳಿತ ಮಂಡಳಿಯ ಸದಸ್ಯರು, ಜಿ ಎಸ್ ಬಿ ಯುವಕ ಮಂಡಳಿ ಸದಸ್ಯರು, ಜಿ ಎಸ್ ಬಿ ಮಹಿಳಾ ಮಂಡಳಿಯ ಸದಸ್ಯರು ಭಾಗವಹಿಸಿದ್ದರು.

