ಉಡುಪಿ : ಮಲ್ಪೆಯಲ್ಲಿ ಉಡುಪಿ ಎಸ್ ಪಿ ಹರಿರಾಮ್ ಶಂಕರ್ ಹೇಳಿಕೆ ನೀಡಿದ್ದು, ಉಡುಪಿಯ ಕೊಡುವೂರು ಸಾಲ್ಮರದಲ್ಲಿ ಸೈಫ್ ಕೊಲೆಯಾಗಿದ್ದು, ಮೂವರು ದುಷ್ಕೃತ್ಯ ಕೃತ್ಯ ಎಸಗಿರುವ ಶಂಖೆ ವ್ಯಕ್ತವಾಗಿದೆ.

ಬೆಳಗಿನ ಜಾವ 10ರಿಂದ 11 ಗಂಟೆಯ ನಡುವೆ ದುಷ್ಕೃತ್ಯ ನಡೆದಿದೆ. ಸೈಫ್ ಮೇಲೆ 18 ಕ್ರಿಮಿನಲ್ ಕೇಸುಗಳಿವೆ. ಹಿರಿಯಡ್ಕ ಠಾಣೆ ಮತ್ತು ಉಡುಪಿ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದಾನೆ. ಸೈಫ್ ಎರಡು ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ.

ಮೂರು ಜನ ಆರೋಪಿಗಳು ಏಕಕಾಲದಲ್ಲಿ ಅಟ್ಯಾಕ್ ಮಾಡಿದ್ದಾರೆ. ಆರೋಪಿಗಳು AKMS ಖಾಸಗಿ ಬಸ್ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ. ಕೊಲೆಗೆ ಕಾರಣ ಮತ್ತು ಆರೋಪಿಗಳ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. ಕೊಲೆಗೆ ನಿಖರ ಕಾರಣ ತನಿಖೆಯಿಂದ ಬಹಿರಂಗವಾಗುತ್ತದೆ.

ಚಾಕು ಮತ್ತು ತಲವಾರ್ ನಿಂದ ದಾಳಿ ಮಾಡಿದ್ದಾರೆ. ಸೊಕೋ ಟೀಮ್ ಇನ್ನಷ್ಟೇ ಸ್ಥಳಕ್ಕೆ ಬರಬೇಕಾಗಿದೆ. ದೇಹದ ಹಲವೆಡೆ ಇರಿದ ಗಾಯಗಳಿವೆ. ಮಲ್ಪೆಯ ಮನೆಯಲ್ಲಿ ಒಬ್ಬರೇ ಇದ್ದಾಗ ಅಟ್ಯಾಕ್ ಆಗಿದೆ.  ವಾಸದ ಮನೆ ಮಣಿಪಾಲ ಭಾಗದಲ್ಲಿದೆ. ಹಿಂದಿನ ಮರ್ಡರ್ಗಳಿಗೆ ಪ್ರತಿಕಾರನಾ ಎಂಬುದು ತನಿಖೆಯಿಂದ ಗೊತ್ತಾಗಬೇಕಾಗಿದೆ.